ಪುಟಿನ್​​ಗೆ ಕ್ಯಾನ್ಸರ್: ಅಧಿಕಾರ ಹಸ್ತಾಂತರ ಮಾಡ್ತಾರಾ?

masthmagaa.com:

ಒಂದ್ಕಡೆ ಯುಕ್ರೇನ್​​​ ಮತ್ತು ರಷ್ಯಾ ನಡುವೆ ಯುದ್ಧ ನಡೀತಿದ್ರೆ ಮತ್ತೊಂದ್ಕಡೆ ರಷ್ಯಾ ಅಧ್ಯಕ್ಷ ಪುಟಿನ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹೀಗಾಗಿ ತಾತ್ಕಾಲಿಕವಾಗಿ ದೇಶದ ಸೆಕ್ಯೂರಿಟಿ ಕೌನ್ಸಿಲ್​ನ ಸೆಕ್ರೆಟರಿ ನಿಕೋಲಾಯ್ ಪಟ್ರುಶೆವ್​​ಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಅಂತ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಪುಟಿನ್ ಆಪರೇಷನ್​​​ಗೆ ಒಳಗಾಗಲೇಬೇಕು ಅಂತ ವೈದ್ಯರು ಸೂಚಿಸಿದ್ದಾರೆ ಅಂತ ರಷ್ಯಾದ ಫಾರಿನ್ ಇಂಟೆಲಿಜೆನ್ಸ್ ಸರ್ವೀಸ್​​ನ ಲೆಫ್ಟಿನೆಂಟ್ ಜನರಲ್ ನಡೆಸೋ ಟೆಲಿಗ್ರಾಂ ಚಾನಲ್​​​​​ ಮಾಹಿತಿ ನೀಡಿದೆ ಅಂತ ವರದಿ ಮಾಡಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ಪುಟಿನ್​​​​ ಸ್ವಲ್ಪ ಸಮಯದವರೆಗೆ ರೆಸ್ಟ್​​ನಲ್ಲಿ ಇರಬೇಕಾಗುತ್ತೆ ಅಂತಲೂ ಉಲ್ಲೇಖಿಸಲಾಗಿದೆ. ಅಂದಹಾಗೆ ಇತ್ತೀಚೆಗೆ ಪುಟಿನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸ್ವಲ್ಪ ಅನಾರೋಗ್ಯ ಪೀಡಿತರಂತೆ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಅಸಹಜವಾಗಿ ವರ್ತಿಸ್ತಿದ್ದಾರೆ. ಹೀಗಾಗಿ ಅವರಿಗೆ ಕ್ಯಾನ್ಸರ್ ಜೊತೆಗೆ ಪಾರ್ಕಿನ್​​ಸನ್​​​​ನಂತ ಮಾನಸಿಕ ರೋಗದಿಂದಲೂ ಬಳಲುತ್ತಿರೋ ಸಾಧ್ಯತೆ ಇದೆ ಅಂತ ವದಂತಿಗಳು ಹರಿದಾಡ್ತಿವೆ. ಅದ್ರಲ್ಲೂ ಕಳೆದ ತಿಂಗಳು ವಿದೇಶಾಂಗ ಸಚಿವ ಸರ್ಜೀ ಲವ್​​ರೋವ್ ಜೊತೆಗಿನ ಸಭೆಯಲ್ಲಿ ಟೇಬಲ್​ನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಕೂಡ ಕಂಡು ಬಂದಿತ್ತು. ಆದ್ರೆ ಅಮೆರಿಕದ ಕಡೆಯಿಂದ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿಯವರನ್ನು ಕೇಳಿದಾಗ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ. ಇನ್ನು ಕೆಲವು ದಿನಗಳ ಹಿಂದಷ್ಟೇ ವ್ಲಾಡಿಮಿರ್ ಪುಟಿನ್ ನಿಕೋಲಾಯ್ ಪಟ್ರುಶೋವ್ ಜೊತೆಗೆ 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ರು. ಈ ವೇಳೆ ತನ್ನ ಆರೋಗ್ಯ ಹದಗೆಟ್ರೆ ಅಧಿಕಾರ ಹಸ್ತಾಂತರದ ಬಗ್ಗೆ ಮಾತುಕತೆ ನಡೆದಿದೆ.. ಯಾಕಂದ್ರೆ ಸದ್ಯ ಸರ್ಕಾರದಲ್ಲಿ ಪುಟಿನ್ ಹೆಚ್ಚು ನಂಬೋದು ಅಂದ್ರೆ ಅದು ಪಟ್ರುಶೋವ್​​ನ ಮಾತ್ರ ಅಂತ ಹೇಳಲಾಗ್ತಿದೆ. ಇನ್ನೊಂದು ವಿಷ್ಯ ಅಂದ್ರೆ ಈ ಪಟ್ರುಶೋವ್ ಪುಟಿನ್​​ಗಿಂತ ಒಳ್ಳೆಯ ವ್ಯಕ್ತಿ ಏನೂ ಅಲ್ಲ.. ಈತ ಪುಟಿನ್​​ಗಿಂತಲೂ ಪ್ರಳಯಾಂತಕ.. ಕುತಂತ್ರಿ..ಒಂದ್ವೇಳೆ ಪಟ್ರುಶೋವ್ ಅಧಿಕಾರಕ್ಕೆ ಬಂದ್ರೆ ರಷ್ಯಾದ ಸಮಸ್ಯೆಗಳು ಮತ್ತಷ್ಟು ಜಾಸ್ತಿಯಾಗಲಿವೆ ಅಂತ ಕೂಡ ಟೆಲಿಗ್ರಾಂ ಚಾನಲ್​​ನಲ್ಲಿ ವರದಿಯಾಗಿದೆ. ಹಾಗಂತ ಪುಟಿನ್ ದೀರ್ಘಾವಧಿಗೆ ಅಧಿಕಾರವನ್ನು ಪಟ್ರಶೋವ್ ಕೈಗೆ ಬಿಟ್ಟುಕೊಡೋ ಮನುಷ್ಯ ಅಲ್ಲ. ಹೆಚ್ಚು ಅಂದ್ರೆ ಎರಡರಿಂದ ಮೂರು ದಿನಗಳ ಕಾಲ ಅಧಿಕಾರ ನೀಡಬಹುದು ಅಷ್ಟೆ. ಈಗ ರಷ್ಯಾ ಸೆಕ್ಯೂರಿಟಿ ಕೌನ್ಸಿಲ್​​ನ ಸೆಕ್ರೆಟರಿ ಆಗಿರೋ ಪಟ್ರುಶೋವ್​​​ ನೇರವಾಗಿ ಪುಟಿನ್​ಗೆ ವರದಿ ಮಾಡ್ತಾರೆ. ದೇಶದ ಭದ್ರತೆ, ಸೇನೆಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುವ ಕೆಲಸ ಮಾಡ್ತಾರೆ. ಇನ್ನೊಂದು ವಿಷ್ಯ ಅಂದ್ರೆ ಇವರು ಕೂಡ ಪುಟಿನ್ ರೀತಿಯೇ ಸೋವಿಯತ್ ಒಕ್ಕೂಟದ ಗುಪ್ತಚರ ದಳವಾದ ಕೆಜಿಬಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೊದಲೇ ಯುಕ್ರೇನ್ ಜೊತೆಗೆ ರಷ್ಯಾದ ಯುದ್ಧ ನಡೀತಿದೆ. ಪುಟಿನ್ನೇ ಡೇಂಜರ್ ಅನ್ಕೊಂಡ್ರೆ ಈತ ಅವರಿಗಿಂತಲೂ ಅಪಾಯಕಾರಿ, ಕುತಂತ್ರಿ ವ್ಯಕ್ತಿ ಕೈಗೆ ಅಧಿಕಾರ ಸಿಕ್ಕರೆ ಕಥೆಯೇನು ಅನ್ನೋದು ಜಾಗತಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply