ಯುಕ್ರೇನ್‌ನ ಮಾರಿಯೋಪೋಲ್‌ನಲ್ಲಿ ಪುಟಿನ್!‌ ಕ್ರೈಮಿಯಾಕ್ಕೂ ಭೇಟಿ!

masthmagaa.com:

ಯುಕ್ರೇನ್‌ ಸಂಘರ್ಷ ಆರಂಭವಾದಾಗಿನಿಂದ ಮೊದಲ ಬಾರಿಗೆ ಯುಕ್ರೇನ್‌ನ ರಷ್ಯಾ ಆಕ್ರಮಿತ ನಗರಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿ ನೀಡಿದ್ದಾರೆ. ಕಳೆದ ವರ್ಷ ಮೇನಲ್ಲಿ ರಷ್ಯಾ ಪಡೆ ವಶಪಡಿಸಿಕೊಂಡಿರೊ ಯುಕ್ರೇನ್‌ ನಗರ ಮಾರಿಯೋಪೋಲ್‌ ಪ್ರಾಂತ್ಯಕ್ಕೆ ಪುಟಿನ್‌ ಭೇಟಿ ನೀಡಿದ್ದಾರೆ. ಹೆಲಿಕಾಪ್ಟರ್‌ ಮೂಲಕ ಬಂದಿಳಿದ ಪುಟಿನ್‌, ಅಲ್ಲಿನ ಕೆಲ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳನ್ನ ಮಾತಾಡಿಸಿದ್ದಾರೆ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಇದಕ್ಕೂ ಮೊದಲು ಪುಟಿನ್‌ ಕ್ರೈಮಿಯಾಕ್ಕೆ ಭೇಟಿ ನೀಡಿದ್ರು. ಕ್ರೈಮಿಯಾ ರಷ್ಯಾ ಭೂಭಾಗಕ್ಕೆ ಸೇರಿ 9ನೇ ವರ್ಷದ ಹಿನ್ನೆಲೆಯಲ್ಲಿ ಪುಟಿನ್‌ ಈ ಪ್ರವಾಸ ಕೈಗೊಂಡಿದ್ದಾರೆ. ಅಂದ್ಹಾಗೆ 2014ರಲ್ಲಿ ಕ್ರೈಮಿಯಾವನ್ನ ಯುಕ್ರೇನ್‌ನಿಂದ ರಷ್ಯಾ ವಶಕ್ಕೆ ಪಡೆದುಕೊಂಡಿತ್ತು. ಆದ್ರೆ ರಷ್ಯಾದ ಈ ಕ್ರಮವನ್ನ ಯುಕ್ರೇನ್‌ ಆಗಲೀ, ಅಂತಾರಾಷ್ಟ್ರೀಯ ಸಮುದಾಯಗಳಾಗಲೀ ಒಪ್ಪಿಕೊಂಡಿರ್ಲ್ಲಿಲ್ಲ.

-masthmagaa.com

Contact Us for Advertisement

Leave a Reply