ಅಮೆರಿಕದಲ್ಲಿ ರಷ್ಯಾ ಪರ ಇರೋ ಅಧ್ಯಕ್ಷ ಬರ್ಬೇಕು: ಪುಟಿನ್

masthmagaa.com:

ಅಮೆರಿಕಗೆ ಅಧ್ಯಕ್ಷರಾಗಿ ರಷ್ಯಾ ಬಗ್ಗೆ ಒಳ್ಳೆ ಅಭಿಪ್ಯಾಯ, ರಚನಾತ್ಮಕ ಮೈಂಡ್‌ಸೆಟ್‌ ಇರೋ ವ್ಯಕ್ತಿ ಬರಬೇಕು ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಹಾಗಂತ ಕ್ಮೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾಹಿತಿ ನೀಡಿದ್ದಾರೆ. ʻಅಮೆರಿಕ ಅಧ್ಯಕ್ಷ ಆಗೋರಿಗೆ ದ್ವಿಪಕ್ಷೀಯ ಮಾತುಕತೆಯ ಪ್ರಾಮುಖ್ಯತೆ ಗೊತ್ತಿರ್ಬೇಕು. ರಷ್ಯಾ ವಿಚಾರವಾಗಿ ಒಳ್ಳೆ ಅಭಿಪ್ರಾಯ ಹೊಂದಿದ್ದು, ರಷ್ಯಾದ ಇಂಟ್ರಸ್ಟ್‌ಗಳನ್ನ ಗಣನೆಗೆ ತಗೊಳ್ಬೇಕು. ಅಂತೋರ ಜೊತೆ ಕೆಲಸ ಮಾಡೋಕೆ ಪುಟಿನ್‌ ರೆಡಿ ಇದ್ದಾರೆʼ ಅಂತೇಳಿದ್ದಾರೆ. ಅಲ್ಲದೆ ಡೊನಾಲ್ಟ್‌ ಟ್ರಂಪ್‌ ಅಧ್ಯಕ್ಷರಾದ್ರೆ 24 ಗಂಟೆಯಲ್ಲಿ ಯುಕ್ರೇನ್‌ ಬಿಕ್ಕಟ್ಟು ಬಗೆಹರಿಸ್ತೀನಿ ಅಂದಿದ್ದಾರೆ. ಅದಕ್ಕೇನೇಳ್ತೀರ ಅಂತ ಕೇಳಿದ್ದಕ್ಕೆ, ʻಇದು ಅಷ್ಟು ಸುಲಭವಾಗಿ ಸಾಲ್ವ್‌ ಆಗೋವಂತ ಸಮಸ್ಯೆ ಅಲ್ಲ. ಬಹಳ ಕಾಂಪ್ಲಿಕೇಟೆಡ್‌ ಸಮಸ್ಯೆʼ ಅಂತ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply