ರಕ್ಷಣಾ ಕಂಪನಿ ಜೆನ್‌ ಟೆಕ್ನಾಲಜೀಸ್‌ 3ನೇ ತ್ರೈಮಾಸಿಕ ವರದಿ!

masthmagaa.com:

ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಸ್ಮಾಲ್ ಕ್ಯಾಪ್ ಕಂಪನಿಯಾದ ಝೆನ್ ಟೆಕ್ನಾಲಜಿ ಮೂರನೇ ತ್ರೈಮಾಸಿಕದ ಫಲಿತಾಂಶಗಳನ್ನ ಪ್ರಕಟಿಸಿದೆ. ಕಂಪನಿಯ ಲಾಭದಲ್ಲಿ ಮೂರು ಪಟ್ಟು ಹೆಚ್ಚು ಏರಿಕೆಯಾಗಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 15.27 ಕೋಟಿ ರೂ. ಇದ್ದ ಕಂಪನಿಯ ನಿವ್ವಳ ಲಾಭ Q3ಯಲ್ಲಿ 30.57 ಕೋಟಿ ರೂ. ಆಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 9.43 ಕೋಟಿ ರೂ. ಇತ್ತು. ಈಗ ಕಳೆದ ವಾರದಲ್ಲಿ ಝೆನ್‌ ಟೆಕ್ನಾಲಜೀಸ್‌ ಷೇರು 725 ರೂನಲ್ಲಿ ಅಂತ್ಯ ಆಗಿದೆ. ಈ ಸ್ಟಾಕ್ ಒಂದು ವರ್ಷದಲ್ಲಿ ಶೇ.270 ರಷ್ಟು ಮಲ್ಟಿಬ್ಯಾಗರ್ ಆದಾಯವನ್ನು ನೀಡಿದೆ. ಅಂಧ್ಹಾಗೆ 100%ಗಿಂತ ಹೆಚ್ಚಿನ ರಿಟರ್ನ್ಸ್‌ ನೀಡುವ ಷೇರುಳನ್ನ ಮಲ್ಟಿಬ್ಯಾಗರ್‌ ಶೇರುಗಳು ಅಂತ ಕರೀತಿವಿ.

-masthmagaa.com

Contact Us for Advertisement

Leave a Reply