ಬಾಕ್ಸ್‌ ಆಫೀಸ್‌ ನೀರಸ ಪ್ರದರ್ಶನ: PVR Inox ಲಾಭವೂ ಡಲ್‌

masthmagaa.com:

ಭಾರತದ ಅತಿ ದೊಡ್ಡ ಮಲ್ಟಿಪ್ಲೆಕ್ಸ್‌ ಕಂಪನಿ PVR Inoxನ ಮೂರನೇ ಕ್ವಾರ್ಟರ್‌ ಆದಾಯ, ಬಾಕ್ಸ್‌ ಆಫೀಸ್‌ ತರಾನೆ ಡಲ್‌ ಹೊಡೆದಿದೆ. ಈ ತ್ರೈಮಾಸಿಕದಲ್ಲಿ PVR Inoxಗೆ ಕೇವಲ ₹12.8 ಕೋಟಿ ಲಾಭ ಬಂದಿದೆ. ಇದು YoY 20% ಕಮ್ಮಿ. ಶಾರುಖ್‌ ಖಾನ್‌ರ ಡಂಕಿ ನೀರಸ ಪ್ರದರ್ಶನ, ಭಗವಂತ್‌ ಕೇಸರಿ, 12th ಫೇಲ್‌ ಹಾಗೂ ಶಾಮ್‌ ಬಹದ್ದೂರ್‌ ಬಿಟ್ರೆ ಬೇರಾವುದೇ ಸಿನೆಮಾಗಳು ಸದ್ದು ಮಾಡದೇ ಇರೋದ್ರಿಂದ PVR Inox ಆದಾಯಕ್ಕೂ ಸ್ವಲ್ಪ ಹೊಡೆತ ಬಿದ್ದಿದೆ. ಇದ್ರಿಂದ PVR ಇನಾಕ್ಸ್‌ ಶೇರುಗಳು ಇವತ್ತು ಡೌನ್‌ ಆಗಿವೆ. 0.11% ಕುಸಿದು ಪ್ರತಿ ಶೇರಿಗೆ ₹1,460 ಆಗಿದೆ. ಕಳೆದ ವರ್ಷ ಮೇ ನಲ್ಲಿ ಲಿಸ್ಟ್‌ ಆಗಿರೋ ಈ ಶೇರುಗಳು ಸೆಪ್ಟೆಂಬರ್‌ನಲ್ಲಿ ಪೀಕ್‌ಗೆ ಹೋಗಿದ್ವು. ಡಿಸೆಂಬರ್‌ ಮಧ್ಯದಿಂದ ತೀರ ಕುಸಿತ ಕಾಣ್ತಿವೆ. ಈ ತಿಂಗಳಲ್ಲೇ 12% ಕುಸಿದಿದೆ.

-masthmagaa.com

Contact Us for Advertisement

Leave a Reply