ದೆಹಲಿಯಲ್ಲಿ ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಮಹತ್ವದ ಸಭೆ!

masthmagaa.com:

ದೆಹಲಿಯಲ್ಲಿ ಇಂದು ಕ್ವಾಡ್‌ ದೇಶಗಳ ವಿದೇಶಾಂಗ ಸಚಿವರು ಸಭೆ ನಡೆಸಿದ್ದಾರೆ. ವಿದೇಶಾಂಗ ಸಚಿವರಾದ ಎಸ್.ಜೈಶಂಕರ್‌ ಅವ್ರ ನೇತೃತ್ವದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕನ್‌, ಜಪಾನ್‌ನ ಯೋಶಿಮಸಾ ಹಯಾಶಿ ಹಾಗೂ ಆಸ್ಟ್ರೇಲಿಯಾದ ಪೆನಿ ವಾಂಗ್‌ ಭಾಗವಹಿಸಿದ್ದಾರೆ. ಈ ವೇಳೆ ಯುಕ್ರೇನ್‌ನಲ್ಲಿ ಅಣ್ವಸ್ತ್ರ ಬಳಸೋದಾಗಿ ಬೆದರಿಕೆ ಒಡ್ಡುತ್ತಿರುವ ರಷ್ಯಾ ನಡೆಯನ್ನ ಖಂಡಿಸಿದ್ದಾರೆ. ರಷ್ಯಾ ನಡೆಯು ಸ್ವೀಕಾರ ಅರ್ಹವಲ್ಲ ಅಂತ ಸಭೆ ಬಳಿಕ ಬಿಡುಗಡೆ ಮಾಡಿರೊ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜೊತೆಗೆ ಇಂಡೊ-ಪೆಸಿಫಿಕ್‌ ವಲಯದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದು, ಈ ಭಾಗದ ಸಾರ್ವಭೌಮತ್ವವನ್ನ ಕಾಪಾಡೋಕೆ ನಮ್ಮ ಬೆಂಬಲ ಇದೆ ಅಂತ ಹೇಳಿದ್ದಾರೆ. ಅಷ್ಟೆ ಅಲ್ದೆ ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆಯನ್ನ ಹೆಚ್ಚಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನ ನಾವು ವಿರೋಧಿಸುತ್ತೇವೆ ಹಾಗೂ ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ನಿಯೋಜನೆ ಮಾಡ್ತಿರೋ ಚೀನಾವನ್ನ ಕೂಡ ಕ್ವಾಡ್‌ ಸದಸ್ಯರು ಖಂಡಿಸಿದ್ದಾರೆ. ಇನ್ನು ಇದಕ್ಕೆ ಚೀನಾ ಪ್ರತಿಕ್ರಿಯಿಸಿದ್ದು ದೇಶ-ದೇಶಗಳ ನಡುವಿನ ಮಾತುಕತೆ ಶಾಂತಿ ಹಾಗೂ ಅಭಿವೃದ್ಧಿಯ ಕುರಿತಾಗಿ ಇರ್ಬೇಕೆ ಹೊರತು Exclusivity ಅಂದ್ರೆ ಒಬ್ರನ್ನ ದೂರ ಮಾಡೋದ್ರ ಕುರಿತು ಇರ್ಬಾರದು ಅಂತ ಚೀನಾ ನಂಬುತ್ತೆ. ಕ್ವಾಡ್‌ ದೇಶಗಳು ಪರಸ್ಪರ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಇನ್ನೂ ಹೆಚ್ಚಿನ ಕೊಡುಗೆ ನೀಡೊ ಅಗತ್ಯ ಇದೆ ಅಂತ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply