ಚೀನಾ ಹಿಡಿತದಿಂದ ಲಂಕಾ, ನೇಪಾಳ ರಕ್ಷಿಸಲು ಕ್ವಾಡ್‌ ಸಿದ್ದತೆ!

masthmagaa.com:

ನಾಳೆ ಜಪಾನ್‌ನಲ್ಲಿ ಕ್ವಾಡ್‌ ಶೃಂಗಸಭೆ ನಡೆಯಲಿರೋ ಬೆನ್ನಲ್ಲೆ ಮತ್ತೆ ಚೀನಾನೇ ಈ ಸಭೆಯ ಟಾರ್ಗೆಟ್‌ ಆಗಿರಲಿದೆ ಅನ್ನೋ ಸುಳಿವನ್ನ ಭಾರತ ನೀಡಿದೆ. ಇಂಡೋ-ಫೆಸಿಫಿಕ್‌ ಭಾಗದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಕಾರ ಸಾಧಿಸಿ ಉಳಿದ ದೇಶಗಳನ್ನ ಅಸ್ಥಿರ ಸಾಲಗಳಿಂದ ರಕ್ಷಿಸೋದು ಕ್ವಾಡ್‌ನ ಪ್ರಮುಖ ಅಜೆಂಡಾಗಳಲ್ಲಿ ಒಂದು ಅಂತ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಚೀನಾಗೆ ಟಾಂಗ್‌ ನೀಡಿದ್ದಾರೆ. ಶ್ರೀಲಂಕಾ, ನೇಪಾಳದಂತಹ ಸಣ್ಣ ದೇಶಗಳಿಗೆ ಚೀನಾ ನಿಮ್ಮ ಮೂಲಸೌಕರ್ಯ ಕ್ಷೇತ್ರದಲ್ಲಿ ಇನ್ವೆಸ್ಟ್‌ ಮಾಡ್ತೀನಿ, ಸಾಲ ನೀಡ್ತೀನಿ ಅಂತ ಆಸೆ ತೋರಿಸಿ ನಂತ್ರ ಅವುಗಳನ್ನ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಸ್ತಾ ಇದೆ. ಆ ಮೂಲಕ ಆ ದೇಶಗಳ ಮೇಲೆ ತನ್ನ ಹತೋಟಿಯನ್ನ ಸಾಧಿಸ್ತಾ ಇದೆ. ಶ್ರೀಲಂಕಾ ಅದಕ್ಕೆ ಜ್ವಲಂತ ನಿದರ್ಶನ. ಒಂಥರಾ ನೋಡಿದ್ರೆ ಪಾಕಿಸ್ತಾನದ ಕಥೆ ಕೂಡ ಅದೇ… ನೇಪಾಳ ಈಗೀಗ ಸ್ವಲ್ಪ ಪರವಾಗಿಲ್ಲ ಅಂತ ಹೇಳ್ಬಹುದು. ಅಥವಾ ಚೀನಾದ ಆಟದಲ್ಲಿ ನೇಪಾಳದಿಂದ ಅಷ್ಟೊಂದು ಪ್ರಯೋಜನ ಇಲ್ಲದೇ ಇರಬಹುದು. ಆದ್ರೆ ಚೀನಾ ಮಾತ್ರ ಸಿಕ್ಕಸಿಕ್ಕ ಅವಕಾಶದಲ್ಲಿ ಈ ಭಾಗದ ಒಂದೊಂದೆ ದೇಶಗಳನ್ನ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿ ನುಂಗಿ ಹಾಕ್ತಿದೆ. ಅದಕ್ಕೆ ಈಗ ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾ ಕ್ವಾಡ್‌ ಒಕ್ಕೂಟ ಇದನ್ನ ಸವಾಲಾಗಿ ಸ್ವೀಕರಿಸಿವೆ. ನಾಳೆ ನಡೆಯಲಿರುವ ಸಭೆಯಲ್ಲಿ ಇಂತಹ ದೇಶಗಳ ಜೊತೆ ಧನಾತ್ಮಕ ಮತ್ತು ರಚನಾತ್ಮಕ ಸಹಕಾರ ಸಾಧಿಸೋಕೆ, ಸುಸ್ಥಿರ ಮತ್ತು ಬೇಡಿಕೆ ಆಧಾರಿತ ಮೂಲಸೌಕರ್ಯ ನಿರ್ಮಸೋಕೆ ನಿರ್ಣಯ ಕೈಗೊಳ್ಳಲಿವೆ. ಇದ್ರಿಂದ ಆ ದೇಶಗಳ ಮೇಲೆ unsustainable debt ಅಂದ್ರೆ ಅಸ್ಥಿರ ಸಾಲದ ಹೊರೆ ಬೀಳಲ್ಲ ಅಂತ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

ಇನ್ನು ಈ ವೇಳೆ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಜಪಾನ್‌, ಆಸ್ಟ್ರೇಲಿಯಾ ದೇಶದ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ಕೂಡ ನಡೆಸಲಿದ್ದಾರೆ. ಜೊತೆಗೆ ಜಪಾನ್‌ನ 25-30 ಉದ್ದಿಮೆದಾರರ ಜೊತೆಗೆ ಕೂಡ ಚರ್ಚೆ ನಡೆಸಲಿದ್ದಾರೆ.

-masthmagaa.com

Contact Us for Advertisement

Leave a Reply