ಜಪಾನ್‌ನಲ್ಲಿ ನಾಳೆ ಕ್ವಾಡ್‌ ರಾಷ್ಟ್ರಗಳ ಸಭೆ! ಮೋದಿ ಹೇಳಿದ್ದೇನು?

masthmagaa.com:

ಕ್ವಾಡ್‌ ರಾಷ್ಟ್ರಗಳ ಸಭೆ ಜಾಗತಿಕ ಸಮಸ್ಯೆಗಳ ಹಾಗೂ ನಮ್ಮ ಅಭಿಪ್ರಾಯಗಳನ್ನ ಕುರಿತು ಚರ್ಚೆ ಮಾಡೋದಕ್ಕೆ ಉತ್ತಮ ಅವಕಾಶ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ನಾಳೆ ಜಪಾನ್‌ನಲ್ಲಿ ಕ್ವಾಡ್‌ ದೇಶಗಳ ಶೃಂಗಸಭೆ ನಡೆಯಲಿದ್ದು ಪ್ರಧಾನಿ ಮೋದಿ ಸಹ ಭಾಗವಹಿಸಲಿದ್ದಾರೆ. ಈ ಸಭೆಗೂ ಮುನ್ನ ಮಾತನಾಡಿರೋ ಅವರು ʻಇದು ನಾಲ್ಕು ರಾಷ್ಟ್ರಗಳ ಸಹಕಾರ, ಸಂಬಂಧಗಳ ಗಟ್ಟಿಗೊಳಿಸೋಕೆ ಸಹಾಯ ಮಾಡುತ್ತೆ. ಇಂಡೋ ಫೆಸಿಫಿಕ್‌ ಭಾಗ ಸೇರಿದಂತೆ ಸಮಕಾಲೀನ ಜಾಗತಿಕ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನ ಮಂಡನೆ ಮಾಡೋಕೆ ಅವಕಾಶ ಸಿಗುತ್ತೆ. ಭಾರತ, ಈ ಮೂರು ದೇಶಗಳ ಜೊತೆಗೆ ಅಂದ್ರೆ ಜಪಾನ್‌, ಅಮೆರಿಕ, ಹಾಗೂ ಆಸ್ಟ್ರೇಲಿಯಾ ಜೊತೆಗೆ ಪ್ರಾದೇಶಿಕ ಸಹಕಾರ, ಪರಸ್ಪರ ಹಿತಾಸಕ್ತಿ ಹಾಗೂ ಇನ್ನಿತರ ವಿಚಾರಗಳ ಕುರಿತು ಚರ್ಚೆಮಾಡುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಜಪಾನ್‌ನಲ್ಲಿ ಮೋದಿ ಸುಮಾರು 40 ಗಂಟೆಗಳ ಕಾಲ ವಾಸ್ತವ್ಯ ಹೂಡಲಿದ್ದು 23 ಒಪ್ಪಂದಗಳಿಗೆ ಸಹಿ ಹಾಕಬಹುದು ಅಂತ ಹೇಳಲಾಗಿದೆ. ಇದರ ಜೊತೆಗೆ ಜಪಾನ್‌ನ 36 ಕಂಪನಿಗಳ ಮುಖ್ಯಸ್ಥರ ಜೊತೆಗೆ ಮೋದಿ ಸಭೆ ನಡೆಸಲಿದ್ದು ಇದೇ ವೇಳೆ ಭಾರತ ಮೂಲದ ಪ್ರಜೆಗಳನ್ನ ಭೇಟಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply