ಆರ್‌. ಮಾಧವನ್‌ ಮುಡಿಗೆ ಮತ್ತೊಂದು ಕಿರೀಟ !

masthmagaa.com:

ಇತ್ತೀಚೆಗಷ್ಟೇ ಆರ್‌. ಮಾಧವನ್‌ ಅಭಿನಯಿಸಿ, ನಿರ್ದೇಶಿಸಿದ್ದ ರಾಕೆಟ್ರಿ – ದಿ ನಂಬಿ ಎಫೆಕ್ಟ್ ಸಿನಿಮಾ ನ್ಯಾಷನಲ್‌ ಅವಾರ್ಡ್‌ ಗೆದ್ದು ಬೀಗಿತ್ತು. ಈಗ ಆರ್‌ . ಮಾಧವನ್‌ ಅವರು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಮಾಹಿತಿಯನ್ನ X ಖಾತೆಯಲ್ಲಿ ಹಂಚಿಕೊಂಡಿದ್ದು, ಮಾಧವನ್‌ ಅವರಿಗೆ ತಮ್ಮ ಶುಭಾಶಯವನ್ನ ತಿಳಿಸಿದ್ದಾರೆ. ಇದಕ್ಕೆ‌ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ಮಾಧವನ್‌, ತಮ್ಮ ಶುಭ ಹಾರೈಕೆಗಳಿಗಾಗಿ ತುಂಬಾ ಧನ್ಯವಾದಗಳು ಅನುರಾಗ್‌ ಠಾಕೂರ್‌ ಜೀ. ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ನಾನು ಕೈಲಾದಷ್ಟು ಸೇವೆ ಮಾಡುತ್ತೇನೆ ಅಂತ ರಿಪ್ಲೈ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply