ರಾಹುಲ್‌ ಗಾಂಧಿ ಮಾನನಷ್ಟ ಮೊಕದ್ದಮೆ ರಾಜೀನಾಮೆ ವಿಸ್ತರಿಸಿದ ಸೂರತ್‌ ಸೆಷನ್ಸ್‌ ಕೋರ್ಟ್‌!

masthmagaa.com:

ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಕೊಂಚ ರಿಲೀಫ್ ಸಿಕ್ಕಿದೆ. ಸೂರತ್‌ ಸೆಷನ್‌ ಕೋರ್ಟ್‌ ರಾಹುಲ್‌ ಅವ್ರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. 2019ರಲ್ಲಿ ಕೋಲಾರದಲ್ಲಿ ಮೋದಿ ಸಮುದಾಯದ ವಿರುದ್ದ ಮಾತನಾಡಿದ್ದಾರೆ ಅಂತ ಸೂರತ್‌ನ ಮ್ಯಾಜಿಸ್ಟ್ರೇಟ್‌ ಕೋರ್ಟ್ 2 ವರ್ಷ ಶಿಕ್ಷೆ‌ ವಿಧಿಸಿತ್ತು. ಇದರ ಬೆನ್ನಲ್ಲೇ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶವನ್ನ ರದ್ದುಗೊಳಿಸುವಂತೆ, ರಾಹುಲ್‌ ಸೂರತ್‌ ಸೆಷನ್ಸ್‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ರು. ಇದೀಗ ಸೆಷನ್ಸ್‌ ಕೋರ್ಟ್‌ ಜಾಮೀನು ಅವಧಿಯನ್ನ ಏಪ್ರಿಲ್‌ 13ರ ವರೆಗೆ ವಿಸ್ತರಿಸಿದೆ, ಕೇಸ್‌ಗೆ ಸಂಬಂಧಿಸಿದ ವಿಚಾರಣೆಯನ್ನ ಮೇ 2ರಂದು ನಡೆಸೋದಾಗಿ ಹೇಳಿದೆ. ಇತ್ತ ಈ ಆದೇಶ ಹೊರಬಿದ್ದ ಬಳಿಕ ರಾಹುಲ್‌ ಮತ್ತೆ ಮಾರ್ಮಿಕವಾಗಿ ಟ್ವೀಟ್ ಮಾಡಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ದಾಳಿ ಮಾಡಿದಾರೆ. ಇದು ಪ್ರಜಾಪ್ರಭುತ್ವವನ್ನ ಉಳಿಸಲು ‘ಮಿತ್ರಕಾಲ’ದ ವಿರುದ್ಧದ ಹೋರಾಟ. ಈ ಹೋರಾಟದಲ್ಲಿ, ಸತ್ಯವೇ ನನ್ನ ಅಸ್ತ್ರ ಮತ್ತು ಸತ್ಯವೇ ನನ್ನ ಆಸರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply