ಸತ್ಯಪಾಲ್‌ ಮಲಿಕ್‌ ಇಂಟರ್‌ವ್ಯೂ ಮಾಡಿದ ರಾಹುಲ್‌ ಗಾಂಧಿ! ಹೇಳಿದ್ದೇನು?

masthmagaa.com:

ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ ಪಾಲ್‌ ಮಲಿಕ್‌ ಜೊತೆಗಿನ ಇತ್ತೀಚಿನ ಇಂಟರ್‌ವ್ಯೂ ವೀಡಿಯೋವೊಂದನ್ನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ `X’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಸತ್ಯ ಪಾಲ್‌ ಮಲಿಕ್‌ ಅವರು 2019ರ ಪುಲ್ವಾಮಾ ಅಟ್ಯಾಕ್‌ ವಿಚಾರವಾಗಿ ಪುನಃ ಕೇಂದ್ರ ಸರ್ಕಾರವನ್ನ ದೋಷಿ ಅಂತ ಕರೆದಿದ್ದಾರೆ. ಪುಲ್ವಾಮಾ ಅಟ್ಯಾಕ್‌ ವೇಳೆ ನಮ್ಮ CRPF ಸಿಬ್ಬಂದಿ ಬಲಿಯಾಗೋದಕ್ಕೆ ಮೋದಿ ಸರ್ಕಾರವೇ ಕಾರಣ. ಈ ವಿಚಾರವನ್ನ ನಾನು ಅಂದು ಪಿಎಂ ಮೋದಿಗೆ ತಿಳಿಸಿದ್ದೆ. ನಂತರ ಎರಡು ಟಿವಿ ಚಾನೆಲ್‌ಗಳಲ್ಲೂ ಪ್ರಸ್ತಾಪಿಸಿದ್ದೆ. ಬಳಿಕ ನರೇಂದ್ರ ಮೋದಿಯವರು, ಈ ವಿಷಯವನ್ನ ಎಲ್ಲಿಯೂ ಹೇಳಬಾರದು ಅಂತ ಸೂಚಿಸಿದ್ದರು. ಈ ಕುರಿತು ತನಿಖೆ ನಡೆಸಲಾಗುತ್ತೆ ಅಂತ ನಾನು ಅಂದುಕೊಂಡಿದ್ದೆ. ಆದ್ರೆ ಮೋದಿಯವರು ಇದನ್ನ ಚುನಾವಣೆಯ ಲಾಭಕ್ಕೆ ಉಪಯೋಗಿಸಿಕೊಂಡಿದ್ದಾರೆ ಅಂತ ಮಲಿಕ್‌ ಆರೋಪಿಸಿದ್ದಾರೆ.

-amsthmagaa.com

Contact Us for Advertisement

Leave a Reply