RSS ಒಂದು ಮೂಲಭೂತವಾದಿ ಮತ್ತು ಫ್ಯಾಸಿಸ್ಟ್‌ ಸಂಘಟನೆ ಎಂದ ರಾಹುಲ್‌ ಗಾಂಧಿ!

masthmagaa.com:

ಬ್ರಿಟನ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಜೆಪಿ, RSS ವಿರುದ್ಧ ವಾಗ್ದಾಳಿ ಮಾಡಿದ್ದಾರೆ. RSS ಒಂದು ಮೂಲಭೂತವಾದಿ ಮತ್ತು ಫ್ಯಾಸಿಸ್ಟ್‌ ಸಂಘಟನೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಬ್ರಿಟನ್‌ ಸಂಸದರ ಜೊತೆಗೆ ರಾಹುಲ್‌ ಸಂವಾದ ನಡೆಸಿದ್ದಾರೆ. ಭಾರತದ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ಮಾತಾಡುವಾಗ ಪದೇ ಪದೇ ಅವ್ರ ಮೈಕ್ರೋಫೋನ್‌ಗಳನ್ನ ಆಫ್‌ ಮಾಡಲಾಗುತ್ತೆ ಅಂತ ರಾಹುಲ್‌ ಆರೋಪಿಸಿದ್ದಾರೆ. ಭಾರತದಲ್ಲಿ ವಿಪಕ್ಷಗಳಿಗೆ ಉಸಿರುಕಟ್ಟಿಸುವ ವಾತಾವರಣ ಇದೆ. ನಮ್ಮ ಸಂಸತ್ತಿನ ಮೈಕ್‌ಗಳು ಹಾಳಾಗಿರೋದಿಲ್ಲ, ಅವು ಕಾರ್ಯನಿರ್ವಹಿಸುತ್ತಿರುತ್ತವೆ, ಆದರೂ ನಾವು ಅದನ್ನ ಆನ್‌ ಮಾಡಲು ಸಾಧ್ಯವಾಗುವುದಿಲ್ಲ. ಸಂಸತ್‌ನಲ್ಲಿ ಮಾತನಾಡುವ ವೇಳೆ ನನಗೂ ಹಲವು ಬಾರಿ ಇಂಥ ಅನುಭವ ಆಗಿದೆ ಅಂತ ರಾಹುಲ್ ಆರೋಪಿಸಿದ್ದಾರೆ. ಇತ್ತ ರಾಹುಲ್‌ರ RSS ಕುರಿತ ರಾಹುಲ್‌ ಹೇಳಿಕೆಯನ್ನ ಖಂಡಿಸಿರುವ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನ ಮಾಡೋಕೆ ರಾಹುಲ್‌ ಬ್ರಿಟನ್‌ ಪ್ರವಾಸವನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ಭಾರತದ ಪ್ರಜಾಪ್ರಭುತ್ವ, ನ್ಯಾಯಂಗ, ಮತ್ತು ಭದ್ರತೆಯನ್ನ ರಾಹುಲ್ ವಿದೇಶದಲ್ಲಿ ಅವಮಾನಿಸಿದ್ದಾರೆ ಅಂತ ರವಿಶಂಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ದೆ ಭಾರತದ ಆಂತರಿಕ ವಿಷಯಗಳಲ್ಲಿ ಯುರೋಪ್‌ ಮತ್ತು ಅಮೆರಿಕವನ್ನ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿರುವ ರಾಹುಲ್‌, ದೇಶದ ನಿಯಮಗಳ ವಿರುದ್ಧ ಹೋಗಿದ್ದಾರೆ. ರಾಹುಲ್‌ ಗಾಂಧಿ ಬೇಜವಾಬ್ದಾರಿ ಹೇಳಿಕೆ ಕುರಿತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಸಷ್ಟನೆ ನೀಡ್ಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply