ಮೋದಿ ಸರ್‌ನೇಮ್‌ ಕೇಸ್‌: ರಾಹುಲ್‌ ಗಾಂಧಿ ಅರ್ಜಿ ರಿಜೆಕ್ಟ್‌ ಮಾಡಿದ ಗುಜರಾತ್‌ ಹೈಕೋರ್ಟ್‌

masthmagaa.com:

ಮೋದಿ ಸರ್‌ನೇಮ್‌ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವ್ರಿಗೆ ಮತ್ತೆ ಹಿನ್ನಡೆಯಾಗಿದೆ. ಡಿಫೆಮೇಷನ್‌ ಕೇಸ್‌ನಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ತಡೆ ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನ ಗುಜರಾತ್ ಹೈಕೋರ್ಟ್‌ ತಿರಸ್ಕರಿಸಿದೆ. ಕೆಳ ನ್ಯಾಯಾಲಯ ನೀಡಿರೋ ತೀರ್ಪು ಸರಿಯಾಗಿದೆ. ಈ ತೀರ್ಪಿನಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಅಂತ ಹೈಕೋರ್ಟ್ ಹೇಳಿದೆ. ಇದ್ರ ಬೆನ್ನಲ್ಲೇ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗುವುದು ಅಂತ ಕಾಂಗ್ರೆಸ್‌ ಹೇಳಿದೆ. ಅಂದ್ಹಾಗೆ ಈ ಪ್ರಕರಣ ಸಂಬಂಧ ಗುಜರಾತ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೆಳನ್ಯಾಯಾಲಯ ರಾಹುಲ್‌ರಿಗೆ 2 ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ಹಿನ್ನಲೆಯಲ್ಲಿ ರಾಹುಲ್‌ರನ್ನ ಲೋಕಸಭೆ ಸದಸ್ಯ ಸ್ಥಾನದಿಂದ ಕೂಡ ಡಿಸ್‌ಕ್ವಾಲಿಫೈ ಮಾಡಲಾಗಿತ್ತು. ಇನ್ನು ಹೈಕೋರ್ಟ್‌ ಮನವಿ ರಿಜೆಕ್ಟ್‌ ಮಾಡಿರೋ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್‌ನಿಂದ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್‌ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply