ದೆಹಲಿ ವಿಶ್ವವಿದ್ಯಾಲಯದ ಬಾಯ್ಸ್‌ ಹಾಸ್ಟೆಲ್‌ಗೆ ರಾಹುಲ್‌ ಗಾಂಧಿ ದಿಢೀರ್‌ ಭೇಟಿ! ಮುಂದೇನಾಯ್ತು?

masthmagaa.com:

ದೆಹಲಿ ವಿಶ್ವವಿದ್ಯಾಲಯದ ಹಾಸ್ಟೆಲ್‌ ಒಂದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದಿಢೀರ್‌ ಭೇಟಿ ನೀಡಿದ್ದು, ಭದ್ರತಾ ಸಮಸ್ಯೆ ಉಂಟಾಗಿರುವ ಘಟನೆ ನಡೆದಿದೆ. ಮೇ 5ರಂದು ಅಂದ್ರೆ ಶುಕ್ರವಾರ ರಾಹುಲ್‌ರ ಹಠಾತ್‌ ಹಾಗೂ ಅನಧಿಕೃತ ಭೇಟಿಯಿಂದ ಹಾಸ್ಟೆಲ್‌ನಲ್ಲಿ ಗಂಭೀರ ಭದ್ರತಾ ಕಳವಳ ಉಂಟಾಗಿತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಭೇಟಿ ನೀಡಿದ್ದ ರಾಹುಲ್‌, ಹಾಸ್ಟೆಲ್‌ ವಿದ್ಯಾರ್ಥಿಗಳ ಜೊತೆ ಊಟ ಮಾಡಿ ಕೆಲ ಕಾಲ ಅವ್ರ ಜೊತೆ ಸಂವಾದ ನಡೆಸಿ ತೆರಳಿದ್ದಾರೆ. ಆದ್ರೆ ಯಾವುದೇ ಪೂರ್ವ ಸೂಚನೆಯಿಲ್ಲದೆ ರಾಹುಲ್‌ ಅವ್ರು ಹಾಸ್ಟೆಲ್‌ಗೆ ಬಂದಿದ್ದ ಕಾರಣ ವಿದ್ಯಾರ್ಥಿಗಳ ಊಟಕ್ಕೆ ಅಡ್ಡಿಯುಂಟಾಗಿತ್ತು. ಇನ್ಮುಂದೆ ಈ ರೀತಿ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗುತ್ತೆ ಅಂತ ದೆಹಲಿ ವಿಶ್ವವಿದ್ಯಾಲಯ ಹೇಳಿದೆ.

-masthmagaa.com

Contact Us for Advertisement

Leave a Reply