ಇಂಥ ಘಟನೆಗಳು ಮತ್ತೊಮ್ಮೆ ಆಗದಿರಲಿ: ಸಚಿವ ರಾಜನಾಥ್‌ ಸಿಂಗ್‌

masthmagaa.com:

ಕಾಶ್ಮೀರದ ಪೂಂಚ್‌ ಜಿಲ್ಲೆಯ ಉಗ್ರ ದಾಳಿಗೆ ಸಂಬಂಧಪಟ್ಟಂತೆ ಅಲ್ಲಿನ ಭದ್ರತಾ ಪರಿಸ್ಥಿತಿಯನ್ನ ಪರಿಶೀಲಿಸೋಕೆ ಇದೀಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಂಟ್ರಿ ಕೊಟ್ಟಿದ್ದಾರೆ. ಡಿಸೆಂಬರ್‌ 27 ರಂದು ಕಾಶ್ಮೀರದ ಪೂಂಚ್‌-ರಜೌರಿ ಸೆಕ್ಟರ್‌ಗೆ ಭೇಟಿ ನೀಡಿ ಅಲ್ಲಿನ ಸೇನಾ ಸಿಬ್ಬಂದಿಗೆ ಅಡ್ವೈಸ್‌ ಮಾಡಿದ್ದಾರೆ. ಈ ವೇಳೆ ಅವ್ರು, ʻಸೇನೆ ಕೇವಲ ದೇಶವನ್ನ ಶತ್ರುಗಳಿಂದ ರಕ್ಷಿಸಿದ್ರೆ ಸಾಕಾಗಲ್ಲ. ದೇಶದ ಜನರ ಹೃದಯವನ್ನ ಗೆಲ್ಲೋ ಜವಾಬ್ದಾರಿ ಕೂಡ ಅವ್ರದ್ದು. ಅಂದ್ರೆ ದೇಶದ ಜನರನ್ನ ಕೂಡ ರಕ್ಷಿಸ್ಬೇಕುʼ ಅಂತ ಅಡ್ವೈಸ್‌ ಮಾಡಿದ್ದಾರೆ. ಜೊತೆಗೆ ʻಇನ್ಮುಂದೆ ಈ ರೀತಿ ಆಗದೇ ಇರೋ ಹಾಗೇ ನೋಡ್ಕೊಳ್ಳಿ. ಜಮ್ಮು & ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯಾಗ್ಬೇಕು. ಇದೇ ಕಮಿಟ್ಮೆಂಟ್‌ನೊಂದಿಗೆ ಮುಂದಕ್ಕೆ ಸಾಗಿ, ಭಯೋತ್ಪಾದನೆಯನ್ನ ನಾಶ ಮಾಡಿʼ ಅಂತ ಹೇಳಿದ್ದಾರೆ. ಇನ್ನು ಉಗ್ರ ದಾಳಿಗೆ ಗಾಯಗೊಂಡಿರೋ ಯೋಧರ ಬಗ್ಗೆ ಮಾತನಾಡಿದ ರಾಜನಾಥ್‌ ಸಿಂಗ್‌, ʻಗಾಯಗೊಂಡಿರೋ ಸೇನಾ ಸಿಬ್ಬಂದಿ ಆದಷ್ಟು ಬೇಗ ರಿಕವರ್‌ ಆಗ್ಲಿ ಅಂತ ನಾನು ಪ್ರಾರ್ಥನೆ ಮಾಡ್ತೀನಿ. ಈ ಘಟನೆಯ ತೀವ್ರತೆಯನ್ನ ಗಮನದಲ್ಲಿಟ್ಕೊಂಡು, ಈ ಬಗ್ಗೆ ಸೂಕ್ತ ಕ್ರಮ ತೆಗೆದ್ಕೊಳ್ಳೋ ಬಗ್ಗೆ ಮಾತು ಕೊಡ್ತೇನೆ. ನಮಗೆ ಪ್ರತಿಯೊಬ್ಬ ಸೇನಾ ಸಿಬ್ಬಂದಿ ಇಂಪಾರ್ಟೆಂಟ್‌ʼ ಅಂತ ಹೇಳಿದ್ದಾರೆ. ಇನ್ನು ಸಚಿವ ರಾಜ್‌ನಾಥ್‌ ಸಿಂಗ್‌ ವಿಚಾರಣೆ ವೇಳೆ ಸೇನಾ ಸಿಬ್ಬಂದಿಗಳಿಂದ ಹಾನಿಗೊಳಗಾದ ಗಾಯಾಳುಗಳನ್ನ ಭೇಟಿ ಮಾಡಿದ್ದಾರೆ. ರಜೌರಿಯ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಗಾಯಾಳುಗಳು ಹಾಗೂ ಅವ್ರ ಕುಟುಂಬಸ್ಥತಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ತಗೊಳ್ತೀವಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply