ಮೋದಿ ʻಆತ್ಮನಿರ್ಭರ ಭಾರತʼ ಕನಸು ನನಸು: ರಾಜನಾಥ್‌ ಸಿಂಗ್‌!

masthmagaa.com:

ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆ 2028-29ರ ವೇಳೆಗೆ 3 ಲಕ್ಷ ಕೋಟಿ ರೂಪಾಯಿ ರೀಚ್‌ ಆಗುತ್ತೆ ಅಂತ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ʻಪ್ರಧಾನಿ ನರೇಂದ್ರ ಮೋದಿಯವ್ರ ʻಆತ್ಮನಿರ್ಭರ ಭಾರತʼ ಕನಸು ನನಸಾಗಲಿದೆ. ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗ್ತಿದೆ. 50,000 ಕೋಟಿ ರೂಪಾಯಿ ಶಸ್ತ್ರಾಸ್ತ್ರ ಎಕ್ಸ್‌ಪೋರ್ಟ್‌ ಆಗಿಲಿದೆ. ಮೋದಿ ಸರ್ಕಾರ ದೀರ್ಘಕಾಲದ ಲಾಭಕ್ಕೆ ಫೋಕಸ್‌ ಮಾಡ್ತಿದ್ಯೇ ಹೊರತು ಅಲ್ಪಕಾಲದ ಫಲಿತಾಂಶಕ್ಕಲ್ಲ. ಈ ಮೂಲಕ 2047ರ ಒಳಗೆ ಭಾರತವನ್ನ ಅಭಿವೃದ್ಧಿ ಹೊಂದಿ ದ ದೇಶವನ್ನಾಗಿ ಮಾಡೋ ಗುರಿ ಹೊಂದಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply