ಚಂದ್ರನ ಮೇಲೆ ಕಂಪನ?

masthmagaa.com:

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವೈಜ್ಞಾನಿಕ ಅನ್ವೇಷಣೆಗಳು ಮುಂದುವರೆದಿವೆ. ಇದೀಗ ಲ್ಯಾಂಡರ್‌ ವಿಕ್ರಮ್‌ನಲ್ಲಿರುವ ಪೇಲೋಡ್‌ RAMBHA-LP ಇದೇ ಮೊದಲ ಬಾರಿಗೆ ಚಂದ್ರನ ಮೇಲೆ ಪ್ಲಾಸ್ಮಾ ವಾತಾವರಣದ ಬಗ್ಗೆ ಅಧ್ಯಯನ ಮಾಡಿದೆ ಅಂತ ಇಸ್ರೋ ಹೇಳಿದೆ. ಈ ಪ್ಲಾಸ್ಮ ಚಂದ್ರನ ಮೇಲೆ ಬಹುತೇಕ ವಿರಳವಾಗಿದೆ ಅಂತ ತಿಳಿದು ಬಂದಿದೆ. ಈ ಅಧ್ಯಯನದಿಂದ ಚಂದ್ರನಲ್ಲಿರುವ ಪ್ಲಾಸ್ಮಾಗಳಿಂದ ಹೊರಬರುವ ರೇಡಿಯೋ ತರಂಗಗಳ ತೀವ್ರತೆಯನ್ನ ಕಡಿಮೆ ಮಾಡಲು ಸಹಾಯವಾಗುತ್ತೆ. ಜೊತೆಗೆ ಮುಂದಿನ ಚಂದ್ರಯಾನ ಯೋಜನೆಯ ಡಿವೈಸ್‌ಗಳಿಗೆ ಮತ್ತಷ್ಟು ಸ್ಪಷ್ಟವಾದ ವಿನ್ಯಾಸ ಒದಗಿಸುತ್ತದೆ ಅಂತ ಇಸ್ರೋ ಹೇಳಿದೆ. ಇನ್ನು ಲ್ಯಾಂಡರ್‌ನಲ್ಲಿರುವ ಮತ್ತೊಂದು ಉಪಕರಣ Instrument for the Lunar Seismic Activity (ILSA) ರೋವರ್‌ ಚಲನೆಯನ್ನ ದಾಖಲಿಸಿದೆ. ಇದ್ರಲ್ಲಿ ರೋವರ್‌ ನಡೆದಾಡುತ್ತಿರುವ ಕಂಪನಗಳು ಬಿಟ್ರೆ ಆಗಸ್ಟ್‌ 26ರಂದು ನ್ಯಾಚುರಲ್‌ ಆಕ್ಟಿವಿಟಿಯೊಂದನ್ನ ದಾಖಲಿಸಿದ್ದು, ಚಂದ್ರನಲ್ಲಿ ಕಂಪನ ಉಂಟಾಗುವ ಬಗ್ಗೆ ಅಧ್ಯಯನ ನಡೆಸಲಾಗ್ತಿದೆ ಅಂತ ಇಸ್ರೋ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply