ಅತ್ಯಾಚಾರ ಎಸಗಿದಕ್ಕೆ UP ಶಾಸಕನಿಗೆ 25 ವರ್ಷಗಳ ಕಠಿಣ ಜೈಲುವಾಸ!

masthmagaa.com:

2014ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರೋ ಆರೋಪದ ಮೇಲೆ ಇದೀಗ ಉತ್ತರ ಪ್ರದೇಶದ ಶಾಸಕ ರಾಮದುಲಾರ್‌ ಗೊಂಡ್‌ ಅವ್ರಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 10 ಲಕ್ಷ ರೂಪಾಯಿ ಫೈನ್‌ ನೀಡುವಂತೆ ಕೋರ್ಟ್‌ ನಿರ್ದೇಶಿಸಿದ್ದು, ಈ ಹಣವನ್ನ ಸಂತ್ರಸ್ತೆಗೆ ನೀಡಲಾಗುತ್ತೆ ಎನ್ನಲಾಗಿದೆ. ಸದ್ಯ ಈತ ಉತ್ತರಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ದುದ್ದಿ ಕ್ಷೇತ್ರದ ಶಾಸಕನಾಗಿದ್ದಾನೆ. ಆದ್ರೆ ಈ ಪ್ರಕರಣದಿಂದ ಈತ ತನ್ನ ವಿಧಾನಸಭಾ ಸೀಟ್‌ ಕಳೆದುಕೊಳೋ ಚ್ಯಾನ್ಸಸ್‌ ಇದೆ ಅಂತ ಹೇಳಲಾಗ್ತಿದೆ. ಇನ್ನು ಶಾಸಕ ರಾಮದುಲಾರ್‌ ಅಪ್ರಾಪ್ತ ಬಾಲಕಿ ಮೇಲೆ 9 ವರ್ಷಗಳ ಹಿಂದೆ ಅಂದ್ರೆ ನವೆಂಬರ್‌ 4, 2014 ರಂದು ಅತ್ಯಾಚಾರ ಎಸಗಿದ್ದ. ಅತ್ಯಚಾರ ಎಸಗಿದ ನಂತರ, ಈ ಬಗ್ಗೆ ಯಾರ ಬಳಿಯಾದ್ರೂ ಹೇಳಿದ್ರೆ ಪರಿಣಾಮ ಸರಿಯಿರಲ್ಲ ಅಂತ ಬೇರೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದ. ಆದ್ರೆ ಸಂತ್ರಸ್ತೆಯ ಅಣ್ಣ ಈ ಕುರಿತು ಪೊಲೀಸರಿಗೆ ಕಂಪ್ಲೈಂಟ್‌ ಮಾಡಿದ್ದ. ಆ ಟೈಮ್‌ನಲ್ಲಿ ಅಂದ್ರೆ ಈ ಕೃತ್ಯ ಎಸಗೋ ವೇಳೆ ರಾಮದುಲಾರ್‌ ಗೊಂಡ್‌ ಅವ್ರು ಶಾಸಕರಾಗಿಲ್ಲವಿತ್ತು. ಆದ್ರಿಂದ ಈ ಕೇಸ್‌ಗೆ ಸಂಬಂಧಿಸಿ ಪೋಕ್ಸೋ ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭಿಸಲಾಗಿತ್ತು. ಆದ್ರೆ ರಾಮದುಲಾರ್‌ ಗೊಂಡ್‌ ಶಾಸಕರಾದ ನಂತರ ಈ ಕೇಸ್‌ ವಿಚಾರಣೆಯನ್ನ ಎಂಪಿ-ಎಂಎಲ್‌ಎ ಕೋರ್ಟ್‌ಗೆ ಟ್ರಾನ್ಸ್‌ಫರ್‌ ಮಾಡಲಾಗಿತ್ತು. ಆದ್ರೆ ಇದೀಗ 9 ವರ್ಷಗಳ ಬಳಿಕ ಉತ್ತರಪ್ರದೇಶದ ಕೋರ್ಟ್‌ ಶಾಸಕ ರಾಮದುಲಾರ್‌ ಗೊಂಡ್‌ ಅವ್ರಿಗೆ ಕಠಿಣ ಶಿಕ್ಷೆಯನ್ನ ವಿಧಿಸಿದೆ.

-masthmagaa.com

Contact Us for Advertisement

Leave a Reply