ಮಲ್ಟಿಸ್ಟಾರರ್‌ ಮೂವಿಯಲ್ಲಿ ರಮೇಶ್‌ ಅರವಿಂದ್‌, ಗೋಲ್ಡನ್‌ ಸ್ಟಾರ್‌!

masthmagaa.com:

ಸಿನಿಮಾ ರಂಗದಲ್ಲಿ ಮಲ್ಟಿಸ್ಟಾರರ್‌ ಮೂವಿ ಜಾಸ್ತಿ ಆಗ್ತಾ ಇದೆ. ಅದ್ಕೆ ಪುಷ್ಠಿ ಎಂಬಂತೆ ರಮೇಶ್‌ ಅರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕಾಂಬೀನೇಷನ್‌ನಲ್ಲಿ ಒಂದು ಮೂವಿ ಬರ್ತಾ ಇದೆ. ನಿನ್ನೆ ರಮೇಶ್‌ ಅರವಿಂದ್‌ ಬರ್ತ್‌ಡೇ ಆಗಿತ್ತು. ಸೋ ಈ ಸಿನಿಮಾವನನ್ನ ಘೋಷಣೆ ಮಾಡಿದೆ ಚಿತ್ರತಂಡ.

ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಾಣ ಮಾಡಿದ ವಿಖ್ಯಾತ್ ಈಗ ಸಿನಿಮಾ ನಿರ್ಮಾಣದ ಜೊತೆಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ವಿಖ್ಯಾತ್‌ ಅವರ ನಿರ್ದೇಶದಲ್ಲಿ ಗೋಲ್ಡನ್‌ ಸ್ಟಾರ್‌ ಮತ್ತು ರಮೇಶ್‌ ಅರವಿಂದ್‌ ಅವರು ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ.

ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದಕ್ಕೆ ಸ್ಪೆಷಲ್‌ ಆಗಿ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಿದ್ದಾರೆ, ಈ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಕಾರಣ ಆಗಿದೆ. ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಅನ್ನೋದನ್ನ ಕಾದುನೋಡಬೇಕು.

-masthmagaa.com

Contact Us for Advertisement

Leave a Reply