ಕೇರಳ: ಅಪರೂಪದ ಮೆದುಳು ಸೋಂಕಿಗೆ 15 ವರ್ಷದ ಬಾಲಕ ಬಲಿ

masthmagaa.com:

ಡ್ರೈನೇಜ್‌ ನೀರಿನಲ್ಲಿರೋ ಅಮೀಬಾಗಳಿಂದ ಬರುವ ಅಪರೂಪದ ಮೆದುಳು ಸಂಬಂಧಿ ಸೋಂಕು ಕೇರಳದಲ್ಲಿ ಪತ್ತೆಯಾಗಿದೆ. ಪ್ರೈಮರಿ ಅಮೀಬಿಕ್‌ ಮೆನಿಂಗೊ-ಎನ್‌-ಸೆಫಾಲಿಟಿಸ್ ಅನ್ನೋ ಮೆದುಳು ಖಾಯಿಲೆಯಿಂದಾಗಿ ಕೇರಳದ ಪಾನವಳ್ಳಿ ಗ್ರಾಮದ 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಈ ಅಮೀಬಾಗಳು ಇರುವ ಚರಂಡಿ ಅಥ್ವಾ ಕೊಳಕು ನೀರಿನಲ್ಲಿ ಸ್ನಾನ ಮಾಡಿದ್ರೆ ಮನುಷ್ಯನ ದೇಹವನ್ನ ಮೂಗಿನ ಮೂಲಕ ಪ್ರವೇಶ ಮಾಡಿ, ಮೆದುಳು ಜ್ವರವನ್ನ ಉಂಟು ಮಾಡುತ್ತದೆ. ಅಂದ್ಹಾಗೆ ಈ ಸೂಕ್ಷ್ಮಾಣು ಜೀವಿ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಜ್ವರ, ತಲೆನೋವು, ವಾಂತಿ ಹಾಗೂ ಮೂರ್ಛೇಗೆ ಕಾರಣವಾಗಬಹುದು. ಅಂದ್ಹಾಗೆ ಈ ಖಾಯಿಲೆ 2017ರಲ್ಲಿ ಮೊದಲ ಬಾರಿಗೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಕಂಡು ಬಂದಿತ್ತು.

-masthmagaa.com

Contact Us for Advertisement

Leave a Reply