ರಶ್ಮಿಕಾ ಮಂದಣ್ಣ ಈಗ ರಸ್ಮಿಕಾ ಮಡೋನ್ನ!

masthmagaa.com: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ ಪುಷ್ಪ ಸಿನಿಮಾ ಈಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಎಂಡ್ ಕ್ರೆಡಿಟ್ಸ್ ನಲ್ಲಿ ನಾಯಕಿಯ ಹೆಸರು ಬದಲಾಗಿದೆ.

ಅಮೆಜಾನ್ ಮಾಡಿದ ಯಡವಟ್ಟಿನಿಂದಾಗಿ ರಶ್ಮಿಕಾ ಅವರ ಅವರ ಹೆಸರೇ ಬದಲಾಗಿದೆ. ಆಗಿದ್ದಿಷ್ಟೆ, ಪುಷ್ಪ ಚಿತ್ರದ ಕೊನೆಯಲ್ಲಿ ನಟ-ನಟಿಯರ ಹೆಸರುಗಳ ಸಾಲು ಬರುತ್ತದೆ. ಆ ಶೀರ್ಷಿಕೆಯಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ ರಸ್ಮಿಕಾ ಮಡೋನ್ನಾ ಎಂದು ತಪ್ಪಾಗಿ ಬರೆಯಲಾಗಿದೆ.

ಸಧ್ಯಕ್ಕೆ ಇದರ ಸ್ಕ್ರೀನ್‌ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಇನ್ನು ಈ ತಪ್ಪನ್ನು ಅಮೆಜಾನ್ ಹೇಗೆ ಸರಿಪಡಿಸಿಕೊಳ್ಳುತ್ತದೆ ಹಾಗೆ ಈ ವಿಚಾರವಾಗಿ ರಶ್ಮಿಕಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply