ರಶ್ಮಿಕಾ ಮಂದಣ್ಣ ಅರೆಬೆತ್ತಲೆ ವಿಡಿಯೋ ವೈರಲ್‌! ಕೇಂದ್ರ ಐಟಿ ಸಚಿವ ಹೇಳಿದ್ದೇನು?

masthmagaa.com:

ನಟಿ ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ಅರಬೆತ್ತಲೆ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದ್ರೆ ಈ ವಿಡಿಯೋ ರಶ್ಮಿಕಾರದ್ದು ಅಲ್ಲ ಯಾರೋ ಕಿಡಿಗೇಡಿಗಳು ಅವರ ಫೇಸ್‌ ಮಾರ್ಫ್‌ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಸೋಷಿಯಲ್‌ ಮೀಡಿಯಾ ಬಳಕೆದಾರರೊಬ್ರು ಮೂಲ ವಿಡಿಯೋವನ್ನ ಪತ್ತೆ ಮಾಡಿ Xನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವೀಡಿಯೋ ವಾಸ್ತವಾಂಶ ಬಯಲಾದ ಬಳಿಕ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯಿಸಿದ್ದಾರೆ. 202 ರಲ್ಲಿ ಸೂಚಿಸಲಾದ ಐಟಿ ನಿಯಮಗಳ ಅಡಿಯಲ್ಲಿ ಇದು ಪ್ಲಾಟ್‌ಫಾರ್ಮ್‌ಗಳಿಗೆ ಕಾನೂನು ಬಾಧ್ಯತೆಯಾಗಿದೆ. ಯಾವುದೇ ಬಳಕೆದಾರರು ಮತ್ತು ಪ್ಲಾಟ್‌ಫಾರ್ಮ್‌ಗಳು ಇದನ್ನು ಅನುಸರಿಸದಿದ್ದರೆ 36 ಗಂಟೆಗಳಲ್ಲಿ ತಪ್ಪು ಮಾಹಿತಿಗಳನ್ನು ತೆಗೆದುಹಾಕಬೇಕಾಗುತ್ತದೆ ಅಂತ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಹಾಗೇನಾದ್ರೂ ಆ ರೀತಿಯ ಪೋಸ್ಟ್‌ಗಳನ್ನ ತೆಗೆದು ಹಾಕಿಲ್ಲ ಅಂದ್ರೆ ನೊಂದ ವ್ಯಕ್ತಿ ಅಂಥಹ ಕೇಸ್‌ನ್ನ ಕೋರ್ಟ್‌ಗೆ ತೆಗೆದುಕೊಂಡು ಹೋಗ್ಬೋದು ಅಂತ ಎಚ್ಚರಿಸಿದ್ದಾರೆ. ಇನ್ನು ಈ ಬಗ್ಗೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಕೂಡ ಪ್ರತಿಕ್ರಿಯೆ ಕೊಟ್ಟಿದ್ದು, ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇತ್ತ ಈ ವೈರಲ್‌ ವಿಡಿಯೋ ಬಗ್ಗೆ ರಿಯಾಕ್ಟ್‌ ಮಾಡಿರೋ ರಶ್ಮಿಕಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನವನ್ನ ಹೇಗೆಲ್ಲ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದನ್ನ ನೋಡಿದ್ರೆ ತುಂಬಾನೆ ಭಯ ಅಗುತ್ತೆ. ನನಗಷ್ಟೇ ಅಲ್ಲ, ಎಲ್ಲರಿಗೂ ಈ ಭಯ ಕಾಡ್ತಿದೆ. ಇಂತಹ ಒಂದು ಭಯದ ವಿಷಯದ ಬಗ್ಗೆ ಹೇಳೋಕೆ ನನಗೆ ತುಂಬಾನೆ ಬೇಸರ ಆಗುತ್ತಿದೆ ಅಂತ ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply