ಬೆಂಗಳೂರು ರೇವ್‌ ಪಾರ್ಟಿ ಕೇಸ್:‌ ಟಾಲಿವುಡ್‌ನಲ್ಲಿ ಕೋಲಾಹಲ!

masthmagaa.com:

ಬೆಂಗಳೂರು ಹೊರವಲಯ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿ ಪ್ರಕರಣ ಈಗ ಟಾಲಿವುಡ್‌ ಅಂದ್ರೆ ತೆಲಗು ಚಿತ್ರರಂಗದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಭಾನುವಾರ ಎಲೆಕ್ಟ್ರಾನಿಕ್‌ ಸಿಟಿ ಬಳಿ ನಡೆದ ಈ ರೇವ್‌ ಪಾರ್ಟಿಯಲ್ಲಿ ತೆಲುಗಿನ ಖ್ಯಾತ ನಟಿ ಹೇಮಾ ಕೂಡ ಇದ್ರು ಅಂತ ಆರೋಪ ಬಂದಿದೆ. ಆದ್ರೆ ಹೇಮಾ ಮಾತ್ರ ತಾನು ಪಾರ್ಟಿಗೆ ಹೋಗಿಲ್ಲ ಹೈದ್ರಾಬಾದ್‌ ಫಾರ್ಮ್‌ಹೌಸ್‌ನಲ್ಲಿದ್ದೆ… ಅಂತೇಳಿ ವಿಡಿಯೋ ರಿಲೀಸ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಹೇಮಾ ಮಾಧ್ಯಮದವ್ರ ದಿಕ್ಕು ತಪ್ಪಿಸಲು ಹೀಗೆ ಮಾಡ್ತಿದ್ದಾರೆ ಅಂತ ಬೆಂಗಳೂರು ಪೋಲಿಸರು ಹೇಳಿದ್ದಾರೆ. ಜೊತೆಗೆ ಈ ಪಾರ್ಟಿಯಲ್ಲಿ ತೆಲಂಗಾಣದ ಕೆಲ ರಾಜಕಾರಣಿಗಳು, ಟಾಲಿವುಡ್‌ ತಾರಾಗಣ ಕೂಡ ಸೇರಿತ್ತು ಅಂತ ಹೇಳಲಾಗಿದೆ. ಇನ್ನೊಂದೆಡೆ ಸಿಸಿಬಿ ಪೋಲಿಸರಿಗೆ ಈ ಕೇಸ್‌ನ್ನ ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗ್ತಿದೆ ಅಂತ ಬೆಂಗಳೂರು ಪೋಲಿಸ್‌ ಆಯುಕ್ತ ಬಿ. ದಯಾನಂದ್‌ ತಿಳಿಸಿದ್ದಾರೆ. ಅಲ್ದೆ ಈ ಪಾರ್ಟಿ ವೇಳೆ ಗಾಂಜಾ , ಸಿಂಥೆಟಿಕ್ಸ್‌ ಸೇರಿದಂತೆ ಕೆಲ ನಶಾ ಪದಾರ್ಥಗಳು ಸಿಕ್ಕಿವೆ ಅಂತ ಹೇಳಲಾಗ್ತಿದೆ. ಜೊತೆಗೆ ಪಾರ್ಟಿ ಆಯೋಜಿಸಿದ್ದ KL ವಾಸು ಸೇರಿದಂತೆ 5 ಜನರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ 30 ಮಹಿಳೆಯರು ಸೇರಿದಂತೆ ಒಟ್ಟು 98 ಜನರನ್ನ ಮೆಡಿಕಲ್‌ ಟೆಸ್ಟ್‌ಗೆ ಒಳಪಡಿಸಿದ್ದು ಪಾರ್ಟಿ ಜೊತೆಗೆ ಸೆಕ್ಸ್‌ ದಂಧೆಯೂ ನಡಿತಿತ್ತು ಅನ್ನೊ ಮಾಹಿತಿ ಲಭ್ಯ ಆಗಿದೆ.

-masthmagaa.com

Contact Us for Advertisement

Leave a Reply