I‌PL: RCB ಹೆಸರನ್ನ ಬದಲಾಯಿಸಲಿದೆ ಟೀಮ್‌ ಮ್ಯಾನೇಜ್‌ಮೆಂಟ್!

masthmagaa.com:

ಈ ಬಾರಿ IPL ನಲ್ಲಿ‌ RCB ಅಥವಾ ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೋರ್ ಟೀಮ್‌ ತನ್ನ ಹೆಸರನ್ನ ಚೇಂಜ್ ಮಾಡಲಿದೆ ಅಂತ ಗೊತ್ತಾಗಿದೆ. IPL ಆರಂಭಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮನರಂಜನಾ ಕಾರ್ಯಕ್ರಮ ಆಯೋಜಿಸೋಕೆ ಪ್ಲಾನ್‌ ಮಾಡಲಾಗಿದೆ. ಈ ವೇಳೆ ತಂಡದ ಹೆಸರಿನ ಬದಲಾವಣೆ ಬಗ್ಗೆ ಘೋಷಣೆಯಾಗಲಿದೆ ಅಂತ ಮಾಹಿತಿ ಸಿಕ್ಕಿದೆ. ಮುಖ್ಯವಾಗಿ ಬ್ಯಾಂಗಲೋರ್‌ ಬದಲು ಬೆಂಗಳೂರು ಅಂತ ಹೆಸರು ಬದಲಾವಣೆ ಆಗೋ ಸಾಧ್ಯತೆ ಇದೆ ಅಂತ ತಂಡ ರಿಲೀಸ್‌ ಮಾಡಿರೋ ಪ್ರೋಮೋದಿಂದ ಹಿಟ್‌ ಸಿಕ್ಕಿದೆ.

-masthmagaa.com

Contact Us for Advertisement

Leave a Reply