ಅಬ್ಬರಿಸಿದ RCB ಬೊಬ್ಬಿರಿದ ವಿಲ್‌ ಜ್ಯಾಕ್ಸ್‌! ಪತರುಗುಟ್ಟಿದ ಗುಜರಾತ್‌

masthmagaa.com:

ಇನ್ನೇನು ಎಲ್ಲಾ ಮುಗಿದೇ ಹೋಯ್ತು ಅನ್ನೋ ಹೊತ್ತಲ್ಲಿ ಫೀನಿಕ್ಸ್‌ ಹಕ್ಕಿಯಂತೆ ಪುಟಿದೆದ್ದಿರೋ RCB IPLನಲ್ಲಿ ಆರ್ಭಟಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತವರಿನ ತಂಡ ಗುಜರಾತ್‌ಗೆ ನೀರಿಳಿಸಿದೆ. 201ರ ಟಾರ್ಗೆಟ್‌ನ್ನ 4 ಓವರ್‌ ಉಳಿಸಿ ಬಡಿದು ಹಾಕಿದೆ. ಈ ಮೂಲಕ ಕಳೆದ ವರ್ಷದ ಸೇಡನ್ನ ತೀರಿಸಿಕೊಂಡಿದೆ. RCB ಪರ ಇಂಗ್ಲೆಂಡ್‌ನ ಸಿಡಿಗುಂಡು ವಿಲ್‌ ಜ್ಯಾಕ್ಸ್‌ ಅಬ್ಬರಿಸಿದ್ದಾರೆ. ಕೇವಲ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್‌ ಮತ್ತು 5 ಬೌಂಡರಿಗಳ ಮೂಲಕ ಶತಕ ಬಾರಿಸಿದ್ದಾರೆ. ಕಿಂಗ್‌ ಕೊಹ್ಲಿ ಕೂಡ 70 ರನ್‌ ಗಳಿಸಿ ತಂಡಕ್ಕೆ ಸಾಥ್‌ ನೀಡಿದ್ದಾರೆ. ಈ ಮೂಲಕ ಕೊನೇ ಹಂತದಲ್ಲಾದ್ರು RCBಯ ಹೊಸ ಅಧ್ಯಾಯ ಶುರುವಾಗಿದೆ.

-masthmagaa.com

Contact Us for Advertisement

Leave a Reply