7 ವರ್ಷಗಳ ನಂತರ ಆಕ್ಷನ್ ಕಟ್ ಹೇಳಿದ ಉಪ್ಪಿ: UI ಸಿನಿಮಾ ಶೂಟಿಂಗ್ ಇಂದಿನಿಂದ ಶುರು!

masthmagaa.com:

ಇದ್ದದ್ದನ್ನ ಇದ್ದಹಂಗೆ, ರಿಯಾಲಿಟಿಯನ್ನ ಸೂಪರ್ ಆಗಿ ನಿರೂಪಿಸೋ ನಿರುದ್ದೇಶಕ, ಮಾಸ್ಟರ್ ಮೈಂಡ್, ರಿಯಲ್‌ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಇಂದಿನಿಂದ ಫೀಲ್ಡಿಗಿಳಿದಾಗಿದೆ. ಉಪ್ಪಿ ನಿರ್ದೇಶನದ ಸಿನಿಮಾಗೆ ಬಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

7ವರ್ಷಗಳ ನಂತ್ರ ಇಂದು ಉಪ್ಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಉಪ್ಪಿ ಆ್ಯಕ್ಷನ್ ಕಟ್ ಹೇಳ್ತಿದ್ದಂತೆ UI ಸೆಟ್ ರೋಮಾಂಚನಗೊಂಡಿದೆ.

ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಿಸ್ತಿರೋ‌ ಯುಐ ಚಿತ್ರಕ್ಕೆ ಎಲ್ಲಾ ಯುವ ತಂತ್ರಜ್ಞರು‌ ಕೆಲಸ ಮಾಡ್ತಿರೋದು ವಿಶೇಷ.

ಟೈಟಲ್ ಲಾಂಚ್ ,ಮುಹೂರ್ತ ದಿಂದ್ಲೇ ಇಡೀ ದೇಶದಾದ್ಯಂತ ‌ಸಂಚಲನ ಸೃಷ್ಟಿಸಿರೋ ಯುಐ ಇಂದಿನಿಂದ ಚಿತ್ರೀಕರಣ ಆರಂಭಿಸಿದೆ.

-masthmagaa.com

Contact Us for Advertisement

Leave a Reply