ಹೀಟ್‌ವೇವ್‌ ಭೀತಿ: ಜನರಿಗೆ ಹೊರ ಹೋಗದಂತೆ ಸೂಚನೆ ನೀಡಿದ ಬ್ಯಾಂಕಾಕ್‌!

masthmagaa.com:

ಜಗತ್ತಿನಾದ್ಯಂತ ದಾಖಲೆ ಮಟ್ಟದಲ್ಲಿ ತಾಪಮಾನ ಹೆಚ್ಚಾಗ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಥೈಲ್ಯಾಂಡ್‌ ಸರ್ಕಾರ ಅಲ್ಲಿನ ಜನರಿಗೆ ಹೊರಹೋಗದಂತೆ ಎಚ್ಚರಿಕೆ ನೀಡಿದೆ. ದಾಖಲೆಯ ಮಟ್ಟದ ಹೀಟ್‌ವೇವ್‌ನ ಕಾರಣದಿಂದ ಜನರು ಮನೆಯಲ್ಲಿಯೇ ಇರ್ಬೇಕು ಅಂತ ಸೂಚಿಸಿದೆ. ಅದ್ರಲ್ಲೂ ಬಾಂಗ್ಲಾದೇಶ ಹಾಗೂ ಭಾರತ ಸೇರಿದಂತೆ ಹಲವು ಏಷ್ಯಾದ ರಾಷ್ಟ್ರಗಳಲ್ಲಿ ಹೀಟ್‌ವೇವ್‌ ತೀವ್ರಗೊಂಡ ಬೆನ್ನಲ್ಲೇ ಥೈಲ್ಯಾಂಡ್‌ ತನ್ನ ಜನರಿಗೆ ಎಚ್ಚರಿಕೆ ನೀಡಿದೆ. ಅಷ್ಟೆ ಅಲ್ದೇ ಬ್ಯಾಂಕಾಕ್‌ನ ಬಾಗ್ನಾ ನಗರದಲ್ಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ. ಹೀಗಾಗಿ ಜನರು ಹೊರಗಿನ ತಮ್ಮ ಚಟುವಟಿಕೆಗಳನ್ನ ನಿಲ್ಲಿಸುವಂತೆ ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply