ಸನಾತನ ಧರ್ಮ ವಿಚಾರದಲ್ಲಿ, ನಾನು ವಿವಾದಾತ್ಮಕ ಹೇಳಿಕೆ ನೀಡಿಲ್ಲ: ಪರಮೇಶ್ವರ್‌

masthmagaa.com:

ಹಿಂದೂ ಧರ್ಮ ಹುಟ್ಟಿದ್ದು ಹೇಗೆ ಅಂತ ಯಾರಿಗೂ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಧರ್ಮಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಜೈನ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮದ ಬಗ್ಗೆ ಹೇಳಿದ್ದೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರಲಿಲ್ಲ’ ಅಂತ ಹೇಳಿದ್ದಾರೆ. ಇದೇ ವೇಳೆ ನನಗೆ ಹಿಂದೂ ಧರ್ಮದಲ್ಲಿ ಇರುವಷ್ಟು ನಂಬಿಕೆ, ನಾನು ಮಾಡುವಷ್ಟು ಆಚರಣೆ ಬಿಜೆಪಿಯವರಿಗೆ ಇಲ್ಲ. ನನಗಿಂತ ಹೆಚ್ಚೇನೂ ಬಿಜೆಪಿಯವರು ಆಚರಣೆ ಮಾಡುವುದಿಲ್ಲ. ನಾನು ಕೇವಲ ಹೋಲಿಕೆ ಮಾಡಿ ಮಾತನಾಡಿದ್ದೇನೆ ಅಷ್ಟೇ ಅಂತ ಕಿಡಿಕಾರಿದ್ದಾರೆ. ಇದೇ ವೇಳೆ ನನ್ನ ಹೇಳಿಕೆಗೂ ಉದಯನಿಧಿ ಸ್ಟಾಲಿನ್‌ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply