EU ಜೊತೆ ಭಾರತದ ಸಂಬಂಧ ಮತ್ತಷ್ಟು ಡೀಪ್: ಹರ್ವ್ ಡೆಲ್ಫಿನ್‌!

masthmagaa.com:‌

ಮಹತ್ವದ ಬೆಳವಣಿಗೆಯಲ್ಲಿ ಯುರೋಪಿಯನ್‌ ಒಕ್ಕೂಟದ ರಾಯಭಾರಿ ಹರ್ವ್ ಡೆಲ್ಫಿನ್‌ ಭಾರತದ ಜೊತೆಗಿನ ಸಂಬಂಧವನ್ನ ಹಾಡಿಹೊಗಳಿದ್ದಾರೆ. ಯುರೋಪ್‌ ಡೇ ಸೆಲೆಬ್ರೆಷನ್‌ ಡೇ ಇವೆಂಟ್‌ನಲ್ಲಿ ಮಾತನಾಡಿದ ಅವ್ರು, ಭಾರತ ಯುರೋಪಿಯನ್‌ ಯುನಿಯನ್‌(EU)ನಿಂದ ಭಾರತ ಪ್ರಾಮುಖ್ಯತೆ ಪಡೆದ ದೇಶ. ನಮ್ಮ ಯುನಿಯನ್‌ ಜೊತೆ ಭಾರತದ ಸಂಬಂಧ ಇನ್ನಷ್ಟು ಆಳವಾಗಿದೆ ಅಂತೇಳಿದ್ದಾರೆ. ಹೀಗಾಗಿ ಯುರೋಪಿಯನ್‌ ಯುನಿಯನ್‌ ಜೊತೆ ಭಾರತದ ಸಂಬಂಧವನ್ನ ಮತ್ತಷ್ಟು ಗಟ್ಟಿಯಾಗಿಸೊ ಕಾರ್ಯತಂತ್ರಗಳ ಪ್ರಾಮುಖ್ಯತೆ ಬಗ್ಗೆ ಡೆಲ್ಫಿನ್‌ ಮಾತಾಡಿದ್ದಾರೆ. ಅಲ್ದೇ ಭಾರತದ ಜೊತೆ ನಮ್ಮ ಸಂಬಂಧ ಮತ್ತಷ್ಟು ಸ್ಟ್ರಾಂಗ್‌ ಆಗಲಿದೆ ಅಂತೇಳಿ ಭಾರತದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಮುಖವಾಗಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಕೂಡ ಭಾಗಿಯಾಗಿದ್ರು.

-masthmagaa.com

Contact Us for Advertisement

Leave a Reply