ದಲಾಲ್‌ ಪೇಟೆಯಲ್ಲಿ ರಿಲಾಯನ್ಸ್‌ ಭರಾಟೆ! ಒಂದೇ ದಿನ 1 ಲಕ್ಷ ಕೋಟಿ ಏರಿಕೆ!

masthmagaa.com:

ರಿಲಾಯನ್ಸ್‌ಗೆ ಆಹುತಿಯಾಗ್ತಿರೋ ಡಿಸ್ನಿ ತನ್ನ ಮೌಲ್ಯವನ್ನ ಕಡಿಮೆ ಮಾಡಿದ ಬೆನ್ನಲ್ಲೇ ರಿಲಾಯನ್ಸ್‌ ಶೇರುಗಳು ಭರ್ಜರಿ ಎದ್ದಿವೆ. ಇವತ್ತೊಂದೇ ದಿನ 7% ಏರಿಕೆ ಕಂಡ ರಿಲಾಯನ್ಸ್‌ ಇಂಡಸ್ಟ್ರೀಸ್‌ ಶೇರು 19.5 ಲಕ್ಷ ಕೋಟಿ ಮೌಲ್ಯವನ್ನ ದಾಟಿವೆ. ಒಂದೇ ದಿನ ಅಂಬಾನಿ ಕಂಪನಿಯ ಮೌಲ್ಯದಲ್ಲಿ 1 ಲಕ್ಷ ಕೋಟಿ ಏರಿಕೆಯಾಗಿದೆ. ಕಳೆದ 38 ತಿಂಗಳಲ್ಲೇ ಇದು ಅತಿದೊಡ್ಡ ಏರಿಕೆಯಾಗಿದೆ. 300 ಪಾಯಿಂಟ್‌ ಏರಿಕೆ ಕಂಡಿರೋ ನಿಫ್ಟಿಗೆ ರಿಲಾಯನ್ಸ್‌ನಿಂದಲೇ 140 ಪಾಯಿಂಟ್‌ ಹೋಗಿದೆ. ನವಂಬರ್‌ನಲ್ಲಿ 4%, ಡಿಸೆಂಬರ್‌ನಲ್ಲಿ 9% ಏರಿಕೆಯಾದ ಅಂಬಾನಿ ಶೇರುಗಳು ಈಗ ಜನವರಿಯಲ್ಲಿ ಕೂಡ 11% ರೈಸ್‌ ಆಗಿವೆ. ಅಂದ್ಹಾಗೆ ಕಳೆದೆರಡು ಸೆಷನ್‌ಗಳ ಈ ಏರಿಕೆಗೆ ಕಾರಣ ಬ್ಲೂಮ್‌ ಬರ್ಗ್‌ ರಿಪೋರ್ಟ್‌. ರಿಲಾಯನ್ಸ್‌ ಜಿಯೋ ಡಿಸ್ನಿ ಸ್ವಾಧೀನ ಪಡಿಸ್ಕೊಳ್ತಾ ಇರೋದು ಈಗಾಗಲೇ ಗೊತ್ತಿರೋ ವಿಚಾರ. ಈ ಹಿಂದೆ ನಾವು ಕೂಡ ಇದ್ರ ಬಗ್ಗೆ ವಿಶೇಷ ವರದಿ ಮಾಡಿದ್ವಿ. ಆಗ ಡಿಸ್ನಿ ಇಂಡಿಯಾ ತನ್ನ ಮೌಲ್ಯ 10 ಬಿಲಿಯನ್‌ ಡಾಲರ್‌ ಅಂತ ಹೇಳಿತ್ತು. ಆದ್ರೆ ಇತ್ತೀಚಿಗಿನ ನೆಗೋಸಿಯೇಷನ್‌ಗಳಲ್ಲಿ ಅದನ್ನ ಅರ್ಧಕರ್ಧ ಇಳಿಸಿದೆ. ಡಿಸ್ನಿ ತನ್ನ ಮೌಲ್ಯ 4.5 ಬಿಲಿಯನ್‌ ಡಾಲರ್‌ ಅಂದಿದೆ ಅಂತ ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಅಲ್ಲದೇ ಫೆಬ್ರುವರಿಯಲ್ಲಿ ಈ ಒಪ್ಪಂದ ಫೈನಲ್‌ ಆಗಲಿದೆ ಅಂತ ಹೇಳಿದೆ. ಹೀಗಾಗಿ ಈ ವರದಿ ಬಳಿಕ ರಿಲಾಯನ್ಸ್‌ ಶೇರುಗಳು ಏರಿಕೆ ಕಾಣ್ತಿವೆ. ಅಂದ್ಹಾಗೆ ಈ ಒಪ್ಪಂದದ ಪ್ರಕಾರ ಡಿಸ್ನಿಯಲ್ಲಿ ರಿಲಾಯನ್ಸ್‌ 51% ಹಾಗೆ ಡಿಸ್ನಿ 40% ಪಾಲುದಾರಿಕೆ ಹೊಂದಲಿವೆ. ಅತ್ತ ಜೀ-ಸೋನಿ ವಿಲೀನ ಮುರಿದು ಬಿದ್ದಿದ್ದು ರಿಲಾಯನ್ಸ್‌ಗೆ ಯಾರೂ ಕಾಂಪಿಟಿಟರ್‌ ಇಲ್ಲದಂತೆ ಮಾಡಿದೆ. ಇದ್ರಿಂದ ಆಯಿಲ್‌, ಟೆಲಿಕಾಂ, ರಿಯಲ್‌ ಎಸ್ಟೇಟ್‌, ಇ ಕಾಮರ್ಸ್‌, FMCG, ನ್ಯೂಸ್‌ ಮೀಡಿಯಾ ಹೀಗೆ ಪೆಟ್ರೋಲ್‌ನಿಂದ ಹಿಡಿದು ತರಕಾರಿವರೆಗೆ ಎಲ್ಲ ಕ್ಷೇತ್ರದಲ್ಲೂ ಸಾಮ್ರಾಜ್ಯ ಸ್ಥಾಪಿಸಿರೋ ದೇಶದ ಅಂಬಾನಿ ಟಿವಿ ಇಂಡಸ್ಟ್ರೀಗೂ ಕಾಲಿಟ್ಟಂತೆ ಆಗುತ್ತೆ.. ದೇಶದ ಅತಿದೊಡ್ಡ ಟಿವಿ ಚಾನೆಲ್‌ ನೆಟ್‌ವರ್ಕ್‌ ʻಸ್ಟಾರ್‌ ಸಮೂಹʼ ಅಂಬಾನಿ ಪಾಲಾಗಲಿದೆ.

-masthmagaa.com

Contact Us for Advertisement

Leave a Reply