ಕೇವಲ 999 ರೂಪಾಯಿಗೆ ಭಾರತ್‌ ಜಿಯೋ ಫೋನ್‌ ಲಾಂಚ್‌ ಮಾಡಿದ ರಿಲಾಯನ್ಸ್‌!

masthmagaa.com:

ರಿಲಾಯನ್ಸ್‌ ಜಿಯೋ ಕಂಪನಿ ʻಭಾರತ್‌ ಜಿಯೋʼ ಹೆಸರಿನ ಹೊಸ 4ಜಿ ಫೋನ್‌ ರಿಲೀಸ್‌ ಮಾಡಿದೆ. ಭಾರತವನ್ನ 2ಜಿ ಮುಕ್ತ ಮಾಡುವ ನಿಟ್ಟಿನಲ್ಲಿ 4ಜಿ ಸಪೋರ್ಟ್‌ ಮಾಡೋ ಹೊಸ ಫೋನ್‌ ಲಾಂಚ್‌ ಮಾಡಿದ್ದು, ಇದರ ಬೆಲೆ 999 ರೂಪಾಯಿ ಅಂತ ಕಂಪನಿ ಹೇಳಿದೆ. ಈ ಹೊಸ ಭಾರತ್‌ ಜಿಯೋ ಫೋನ್‌ ಮೊದಲಿನ ರೀತಿ ಕೀ ಪ್ಯಾಡ್‌ ಫೀಚರನ್ನೇ ಹೊಂದಿದೆ. ಆದ್ರೆ ವಿಶೇಷ ಅಂದ್ರೆ ಇದ್ರಲ್ಲಿರೋ ಜಿಯೋ ಪೇ ಮೂಲಕ UPI ಬಳಸಿ ಹಣ ವರ್ಗಾವಣೆ ಮಾಡ್ಬೋದು. ಅಂದ್ಹಾಗೆ 10 ಲಕ್ಷ ಜಿಯೋ ಭಾರತ್ ಫೋನ್ ತಯಾರಾಗಿದ್ದು, ಜುಲೈ 7ರಿಂದ ಎಲ್ಲಾ ರಿಟೇಲ್ ಸ್ಟೋರ್​ಗಳಲ್ಲಿ ಪರ್ಚೇಸ್‌ ಮಾಡ್ಬೋದು ಅಂತ ಕಂಪನಿ ತಿಳಿಸಿದೆ.

-masthmagaa.com

Contact Us for Advertisement

Leave a Reply