ಸಮುದ್ರ ಮಧ್ಯದಲ್ಲಿ ಮುಂದುವರೆದ ಚೀನಾ-ಫಿಲಿಪೀನ್ಸ್‌ ಜಗಳ!

masthmagaa.com:

ಸಮುದ್ರ ಮಧ್ಯದಲ್ಲಿ ಚೀನಾ ಹಾಗೂ ಫಿಲಿಪೀನ್ಸ್‌ ದೇಶಗಳ ಜಗಳ ಮುಂದುವರೆದಿದೆ. ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ತಮ್ಮ ಬೋಟ್‌ಗಳ ಮೇಲೆ ಚೀನಾ ಪಡೆ ಅಪ್ರಚೋದಿತ ಜಲ ಫಿರಂಗಿಗಳನ್ನ ಹಾರಿಸಿತ್ತು ಅಂತ ಆರೋಪಿಸಿತ್ತು. ಇದೀಗ ವಿವಾದಿತ ರೆನಾಯ್‌ ರೀಫ್‌ನಲ್ಲಿ ನಿಲ್ಲಿಸಿರೊ ಯುದ್ಧ ಹಡಗುಗಳನ್ನ ತೆರೆವುಗೊಳಿಸುವಂತೆ ಫಿಲಿಪೀನ್ಸ್‌ಗೆ ಚೀನಾ ಒತ್ತಾಯಿಸಿದೆ. ಈ ರೆನಾಯ್‌ ರೀಫ್‌ನ್ನ ಚೀನಾ ತನ್ನ ನನ್ಶಾ ದ್ವೀಪಗಳ ಭಾಗ ಅಂತ ಕರೆದುಕೊಂಡಿದೆ. ಹೀಗಾಗಿ ಅಲ್ಲಿ ನಿಲ್ಲಿಸಿರೊ ಹಡಗುಗಳನ್ನ ತೆರೆವುಗೊಳಿಸುವಂತೆ ಹೇಳಿದೆ. ಇತ್ತ ಫಿಲಿಪೀನ್ಸ್‌ ಪ್ರತಿಬಾರಿ ತನ್ನ ಹಡಗುಗಳನ್ನ ತೆರೆವುಗೊಳಿಸ್ತೀವಿ ಅಂತ ಹೇಳ್ತಾ ಬಂದಿದೆ. ಆದ್ರೆ ಈವರೆಗೂ ತೆರೆವುಗೊಳಿಸಿಲ್ಲ. ಈ ಬಾರಿ ಏನ್‌ ಮಾಡುತ್ತೊ ಕಾದುನೋಡಬೇಕು.

-masthmagaa.com

Contact Us for Advertisement

Leave a Reply