ಗಣರಾಜ್ಯೋತ್ಸವ ಪ್ರಯುಕ್ತ ಭಾರತಕ್ಕೆ ಬಂದಿಳಿದ ಫ್ರಾನ್ಸ್‌ ಅಧ್ಯಕ್ಷ!

masthmagaa.com:

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರಾನ್‌ ಭಾರತಕ್ಕೆ ಬಂದಿಳಿದಿದ್ದಾರೆ. ರಾಜಸ್ತಾನದ ಜೈಪುರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮ್ಯಾಕ್ರಾನ್‌ರನ್ನ ವಿದೇಶಾಂಗ ಸಚಿವ ಎಸ್‌.ಜೈ‌ ಶಂಕರ್ ಹಾಗೂ ರಾಜಸ್ತಾನ್‌ ನೂತನ ಸಿಎಂ ಭಜನ್‌ಲಾಲ್‌ ಶರ್ಮಾ ಸ್ವಾಗತಿಸಿದ್ರು. ಬಳಿಕ ಮ್ಯಾಕ್ರಾನ್‌ ಅಮೇರ್ ಕೋಟೆ, ಜಂತರ್‌ ಮಂತರ್‌ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿ, ನಂತ್ರ ಪ್ರಧಾನಿ ಮೋದಿ ಜೊತೆ ರೋಡ್‌ ಶೋನಲ್ಲಿ ಭಾಗಿಯಾಗಿದ್ದಾರೆ. ಇನ್ನು ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮ್ಯಾಕ್ರಾನ್‌ ಚೀಫ್‌ ಗೆಸ್ಟ್‌ ಆಗಿ ಭಾಗಿಯಾಗಲಿದ್ದಾರೆ. ವಿಶೇಷ ಅಂದರೆ ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿ ನಡೆಯೋ ಬಾಸ್ಟೈಲ್‌ ಡೇಗೆ ಚೀಫ್‌ ಗೆಸ್ಟ್‌ ಆಗಿ ಹೋಗಿದ್ರು. ಈಗ ಮ್ಯಾಕ್ರಾನ್‌ ಭಾರತಕ್ಕೆ ಬಂದಿದ್ದಾರೆ. ಅಂದ್ಹಾಗೆ ಈ ಬಾರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಅನ್ನೋ ವಾತವರಣ ಇತ್ತು. ಆದ್ರೆ ನಿಜ್ಜರ್‌ ವಿಚಾರವಾಗಿ ಕೆನಡಾ ಜೊತೆಗೆ ಪನ್ನುನ್‌ ವಿಚಾರವಾಗಿ ಅಮೆರಿಕ ಜೊತೆಗೆ ರಾಜತಾಂತ್ರಿಕ ಸಂಬಂಧದಲ್ಲಿ ಏರುಪೇರಾಗಿತ್ತು. ಇದರ ಬೆನ್ನಲ್ಲೇ ವೈಟ್‌ಹೌಸ್‌ ಅಮೆರಿಕದಲ್ಲಿ ಎಲೆಕ್ಷನ್‌ ಇರೋ ಕಾರಣ ಅವರಿಗೆ ಟೈಮ್‌ ಇಲ್ಲ ಅವರು ಬರಲ್ಲ ಅಂತ ಹೇಳಿಕೆ ಕೊಟ್ಟಿತ್ತು. ಇದರ ಬೆನ್ನಲ್ಲೇ ಭಾರತ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ರಾಕ್ರಾನ್‌ ಅವರನ್ನ ಕರೆಸಿ ಅಮೆರಿಕಗೆ ಟಾಂಟ್‌ ಕೊಟ್ಟಿದೆ. ಇಲ್ಲಿ ಟಾಂಟ್‌ ಯಾಕಂದ್ರೆ ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ ಹಾಗೂ ಅಮೆರಿಕ ಸಂಬಂಧ ಸರಿ ಇಲ್ಲ. ಅಮೆರಿಕ ಫ್ರಾನ್ಸ್‌ನ ಮಿತ್ರ ದೇಶವಾದ್ರೂ ಅವರು ಬ್ರಿಟನ್‌ ಜೊತೆ ಕ್ಲೋಸ್‌ ಇರೋ ರೀತಿ ಫ್ರಾನ್ಸ್‌ ಅವರ ಜೊತೆಗೆ ಇಲ್ಲ. ಆಕುಸ್‌ ಒಪ್ಪಂದ ಮಾಡ್ಕೊಂಡು ಬ್ರಿಟನ್‌ ಅಮೆರಿಕ ಆಸ್ಟ್ರೇಲಿಯಾಗಳು ಒಟ್ಟಾಗಿವೆ. ಫ್ರಾನ್ಸ್‌ನ ದೂರ ಇಟ್ಟಿವೆ. ಇನ್ನು Anglosphere ದೇಶಗಳು ಸೇರ್ಕೊಂಡು ಅಂದ್ರೆ ಇಂಗ್ಲೀಷ್‌ ಮಾತಾಡೋ, ಅಮೆರಿಕ ಬ್ರಿಟನ್‌ ಕೆನಡಾ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ದೇಶಗಳು ಸೇರ್ಕೊಂಡು 5 eye ಅಂತ ಗುಂಪು ಮಾಡ್ಕೊಂಡಿವೆ. ಈ ಗುಂಪಲ್ಲಿ ಗುಪ್ತಚರ ಮಾಹಿತಿ ರಕ್ಷಣಾ ಸಹಕಾರ ಎಲ್ಲಾವೂ ಇರ್ತವೆ. ಸೋ ಇಂಥಾ ಇಂಪಾರ್ಟೆಂಟ್‌ ಗ್ರೂಪಲ್ಲೂ ಫ್ರಾನ್ಸ್‌ನ್ನ ಹೊರಗಿಟ್ಟಿದ್ದಾರೆ. ಯಾಕಂದ್ರೆ ಫ್ರಾನ್ಸ್‌ ಮೊದಲಿನಷ್ಟು ಅಮೆರಿಕ ಮಾತು ಕೇಳಲ್ಲ. ಜೊತೆಗೆ ಈ ಇಂಗ್ಲೀಷ್‌ ಮಾತಾಡೋ ದೇಶಗಳಿಗೂ ಪ್ರೆಂಚ್ ಮಾತಾಡೋ ಫ್ರಾನ್ಸ್‌ ದೇಶಕ್ಕೂ ಭಾಷಿಕವಾಗಿ ಸಾಂಸ್ಕೃತಿಕವಾಗಿ ಸಾಕಷ್ಟು ವ್ಯತ್ಯಾಸ ಇದೆ. ಜೊತೆಗೆ ಇತ್ತೀಚಿಗೆ ಯುಕ್ರೇನ್‌ ರಷ್ಯಾ ಯುದ್ದದಲ್ಲೂ ಫ್ರಾನ್ಸ್‌ ಒಂದು ಹಂತದಲ್ಲಿ ನ್ಯೂಟ್ರಾಲ್‌ ಆಗಿ ಇರೋಕೆ ಟ್ರೈ ಮಾಡಿತ್ತು. ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌, ಪುಟಿನ್‌ ಹಾಗೂ ಯುಕ್ರೇನ್‌ ನಡುವೆ ಸಂಬಂಧ ಕುದುರಿಸೋಕೆ ಎಫರ್ಟ್‌ ಹಾಕಿದ್ರು. ಬಟ್ ಇದೆಲ್ಲಾ ಅಮೆರಿಕಗೆ ಇಷ್ಟ ಇರಲಿಲ್ಲ. ಯಾಕಂದ್ರೆ ಅಮೆರಿಗೆ ಯುಕ್ರೇನ್‌ ಯುದ್ದ ಬೇಕಾಗಿತ್ತು. ಸೋ ಈ ಎಲ್ಲಾ ಕಾರಣಗಳಿಂದ ಅಮೆರಿಕ ಹಾಗೂ ಫ್ರಾನ್ಸ್‌ ನಡುವೆ ಮೊದಲಿನಷ್ಟು ಉತ್ತಮ ಸಂಬಂಧ ಇಲ್ಲ. ಇದೇ ಕಾರಣಕ್ಕೆ ಫ್ರಾನ್ಸ್‌ ಭಾರತದೊಂದಿಗೆ ಉತ್ತಮ ಸಂಬಂಧವನ್ನ ಡೀಪ್‌ ಮಾಡ್ಕೊಳ್ತಾ ಇದೆ. ಉಭಯ ದೇಶಗಳ ಮಧ್ಯೆ ಪ್ರಮುಖ ಹೂಡಿಕೆ ಯೋಜನೆಗಳು, ವ್ಯಾಪಾರ ಹಾಗೂ ವಾಣಿಜ್ಯ ಸಹಕಾರಗಳು ಬಹಳಷ್ಟಿವೆ. ಫ್ರಾನ್ಸ್‌ ನಮಗೆ ಹಿಂದಿನಿಂದಲೂ ಫ್ರೆಂಡ್ಲಿ ದೇಶವಾದ್ರೂ ಇತ್ತೀಚಿಗೆ ನಮ್ಮ ಅವರ ಸಂಬಂಧ ತುಂಬಾ ಚೆನ್ನಾಗಿವೆ.ಭಾರತದ ಸ್ಮಾರ್ಟ್‌ ಸಿಟಿ ಯೋಜನೆಗಳು, ರೈಲ್ವೇ, ಟೂರಿಸಂ, ಡಿಫೆನ್ಸ್‌ ಸೆಕ್ಟರ್‌ನಲ್ಲಿ ಎರಡೂ ದೇಶಗಳು ಒಟ್ಟಿಗೆ ಕೆಲಸ ಮಾಡ್ತಿವೆ. ಫ್ರಾನ್ಸ್‌ನ ಮಿರಾಜ್‌ ಹಾಗೂ ರಫೆಲ್‌ ಫೈಟರ್‌ಜೆಟ್‌ಗಳು ಇಂಡಿಯನ್‌ ಏರ್‌ಫೋರ್ಸ್‌ಗೆ ಶಕ್ತಿ ಕೊಟ್ಟಿವೆ. 2022-23ರ ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರ ಬರೋಬ್ಬರಿ 13 ಬಿಲಿಯನ್‌ ಡಾಲರ್‌, ಅಂದ್ರೆ ಸುಮಾರು 1.08 ಲಕ್ಷ ಕೋಟಿಯಷ್ಟಿದೆ. ಕಳೆದ ವರ್ಷಕ್ಕಿಂತ ಇದು 7.72% ಹೆಚ್ಚು. ಫ್ರಾನ್ಸ್‌ನಿಂದ ಭಾರತಕ್ಕೆ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 10.5 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 90 ಸಾವಿರ ಕೋಟಿ FDI ಅಥ್ವಾ ವಿದೇಶಿ ಬಂಡವಾಳ ಹರಿದು ಬಂದಿದೆ. ರಷ್ಯಾವನ್ನ ಬಿಟ್ರೆ ಭಾರತಕ್ಕೆ ಅತಿಹೆಚ್ಚು ರಕ್ಷಣಾ ಉಪಕರಣಗಳನ್ನ ಕೊಡೋ ದೇಶ ಫ್ರಾನ್ಸ್. ಸೋ ಇಬ್ರ ಸಂಬಂಧ ಗಟ್ಟಿಗೊಳ್ತಾ ಇದೆ. ಇಂಥ ಹೊತ್ತಲ್ಲೇ ನಮಗೂ ಅಲ್ಲಿ ಫ್ರೆಂಡ್‌ ಇದ್ದಾರೆ ಅಂತ ಭಾರತ ಮ್ಯಾಕ್ರಾನ್‌ ಅವರನ್ನ ಕರೆಯೋ ಮೂಲಕ ಭಾರತ ಅಮೆರಿಕಗೂ ಟಾಂಟ್‌ ಕೊಟ್ಟಿದೆ. ಜೊತೆಗೆ ಕೆನಡಾ ಹಾಗೂ ಅಮೆರಿಕ ಜೊತೆಗೆ ಖಲಿಸ್ತಾನಿ ವಿಚಾರವಾಗಿ ಭಾರತಕ್ಕೆ ಮನಾಸ್ತಾಪ ಇರೋ ಹೊತ್ತಲ್ಲೇ ಫ್ರಾನ್ಸ್‌ ಅಧ್ಯಕ್ಷ ಇಲ್ಲಿಗೆ ಭೇಟಿ ಕೊಟ್ಟು ಅವರಿಗೂ ಒಂದು ಮೆಸೇಜ್‌ ಪಾಸ್‌ ಮಾಡಿದ್ದಾರೆ.

ಇನ್ನು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಿಶೇಷ ಸಾಧನೆ ಮಾಡಿದ 1,132 ಪೋಲಿಸ್‌ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ಶೌರ್ಯ & ಸೇವಾ ಪದಕಗಳನ್ನ ನೀಡಲಾಗುತ್ತೆ ಅಂತ ಗೊತ್ತಾಗಿದೆ. ಇದ್ರಲ್ಲಿನ 275 ಶೌರ್ಯ ಪದಕಗಳ ಪೈಕಿ 72 ಪದಕಗಳನ್ನ ಜಮ್ಮು-ಕಾಶ್ಮೀರದ 72 ಪೋಲಿಸ್‌ ಸಿಬ್ಬಂದಿಗೆ ನೀಡ್ತಿರೋದು ವಿಶೇಷ.

ಇನ್ನು ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ಮಾತನಾಡಿದ್ದಾರೆ. ಭಾರತ ಪ್ರಜಾಪ್ರಭುತ್ವ ತಾಯಿ, ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗಿದೆ. ಇದೊಂದು ಐತಿಹಾಸಿಕ ಹೆಜ್ಜೆ ಅಂತ ದೇಶದ ಸಾಧನೆಯನ್ನ ಗುಣಗಾನ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply