ಜೋ ಬೈಡನ್‌ ಪರ ನಿಂತ ಅಮೆರಿಕದ ವಿಪಕ್ಷ ರಿಪಬ್ಲಿಕನ್‌ ಪಾರ್ಟಿ! ನಡೆದಿದ್ದೇನು?

masthmagaa.com:

ಅಮೆರಿಕದ ಗಡಿ ಭದ್ರತೆಯ ವಿಚಾರ ಇದೀಗ ಅಲ್ಲಿನ ಮುಂಬರೋ 2024ರ ಚುನಾವಣೆಯ ಬಹುದೊಡ್ಡ ರಾಜಕೀಯ ಸಮಸ್ಯೆಯಾಗ್ಬಿಟ್ಟಿದೆ. ಮೆಕ್ಸಿಕೋ ಗಡಿಯಲ್ಲಿ ಅಕ್ರಮವಾಗಿ ವಲಸೆ ಬರೋರ ಸಂಖ್ಯೆ ಹೆಚ್ಚಾಗೋಕೆ ಜೋ ಬೈಡನ್‌ ಸರ್ಕಾರವೇ ಕಾರಣ ಅಂತ ಅಮೆರಿಕದ ರಿಪಬ್ಲಿಕನ್‌ ಪಕ್ಷ ಆರೋಪಿಸಿತ್ತು. ಆದ್ರಿಂದ ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಸೆಕ್ರೆಟರಿ ಅಲೆಹಂಡ್ರೋ ಮಯೋರ್ಕಾಸ್‌ (Alejandro Mayorkas) ಅವ್ರನ್ನ ಕೆಳಗಿಳಿಸೋಕೆ ಮುಂದಾಗಿತ್ತು. ಆದ್ರೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಡೆದ ವೋಟಿಂಗ್‌ನಲ್ಲಿ ಅಚ್ಚರಿಯ ಬೆಳವಣಿಗೆ ಆಗಿದೆ. ತಮ್ಮದೇ ಪಕ್ಷದ ನಾಲ್ವರು ಅಡ್ಡಮತದಾನ ಮಾಡಿದ್ರಿಂದ ರಿಪಬ್ಲಿಕನ್‌ ಪ್ರಯತ್ನ ವ್ಯರ್ಥವಾಗಿದೆ.

-masthmagaa.com

Contact Us for Advertisement

Leave a Reply