ಕೊನೆಗೂ ಪರಿಸರ ಸ್ನೇಹಿ ಪ್ಲಾಸ್ಟಿಕ್‌ ಕಂಡುಹಿಡಿದ ವಿಜ್ಞಾನಿಗಳು!

masthmagaa.com:

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಹಾನಿಯುಂಟಾಗ್ತಿದೆ ಅಂತ ಗೊತ್ತಿದ್ರೂ ಸಹ ಮನುಷ್ಯನ ಜೀವನ ಪ್ಲಾಸ್ಟಿಕ್‌ ಇಲ್ಲದೆ ಊಹಿಸಿಕೊ‍ಳ್ಳಲು ಸಾಧ್ಯವಿಲ್ಲ. ವೈದ್ಯಕೀಯ ಸಾಧನಗಳಿಂದ ಹಿಡಿದು ದೈನಂದಿನ ಬಳಕೆಯ ಉತ್ಪನ್ನಗಳ ಪ್ಯಾಕೇಜಿಂಗ್‌ವರೆಗೂ ಪ್ಲಾಸ್ಟಿಕ್‌ನ್ನ ಬಳಸಲಾಗ್ತಿದೆ. ಪರಿಸರ ಸ್ನೇಹಿ ಪ್ಲಾಸ್ಟಿಕ್‌ಗಾಗಿ ಸಂಶೋಧನೆ ನಡೆಸೊ ವಿಜ್ಞಾನಿಗಳ ಪ್ರಯತ್ನ ಮುಂದುವರೆದಿದೆ. ಇತ್ತೀಚಿನ ಸಂಶೋಧನೆ ಮೂಲಕ ಅಮೆರಿಕದ ವಿಜ್ಞಾನಿಗಳು ನೂತನ ಪ್ಲಾಸ್ಟಿಕ್‌ನ್ನ ತಯಾರಿಸಿದ್ದಾರೆ ಅಂತ ವರದಿಯಾಗಿದೆ. ಈ ಪ್ಲಾಸ್ಟಿಕ್‌ನ್ನ ಕಚ್ಛಾ ಅನಿಲ ಅಥ್ವಾ ಅದ್ರ ಉಪಉತ್ಪನ್ನಗಳ ಬದ್ಲಾಗಿ ethyl cyanoacrylate ಅನ್ನೊ ರಸಾಯನಿಕ ಬಳಸಿಕೊಂಡು ತಯಾರಿಸಲಾಗಿದೆ. ಈ ನೂತನ ಪ್ಲಾಸ್ಟಿಕ್‌ ಮೊಸರಿನ ಡಬ್ಬಿಗಳು, ಒಂದು ಬಾರಿ ಬಳಸುವ ಲೋಟಗಳಲ್ಲಿ ಬಳಸಲಾಗುವ ಪಾಲಿಸ್ಟರಿನ್‌ ಅನ್ನ ರಿಪ್ಲೇಸ್‌ ಮಾಡಲಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply