ಒಡಿಸ್ಸಾ ಕರಾವಳಿಯ ಆಮೆಗಳಿಗಾಗಿ ಕ್ಷಿಪಣೆ ಪರೀಕ್ಷೆಯನ್ನೆ ಮುಂದೂಡಿದ DRDO!

masthmagaa.com:

ಒಡಿಸ್ಸಾ ಕರಾವಳಿಯ ವೀಲರ್‌ ದ್ವೀಪದಲ್ಲಿ ಆಲೀವ್‌ ರಿಡ್ಲೆ ಆಮೆಗಳ ಸಂತಾನೋತ್ಪತ್ತಿ ಕಾಲ ಇರೋದ್ರಿಂದ DRDO ತನ್ನ ಕ್ಷಿಪಣಿ ಪರೀಕ್ಷಾ ಕಾರ್ಯಗಳಿಗೆ ಬ್ರೇಕ್‌ ನೀಡಿದೆ. ವರ್ಷದ ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಮುದ್ರ ತೀರಕ್ಕೆ ಬರೋ ಆಲಿವ್‌ ರಿಡ್ಲೆ ಕಡಲ ಆಮೆಗಳು ಸಮುದ್ರ ತೀರದ ಮರಳಿನಲ್ಲಿ ಬಿಲಗಳನ್ನ ತೋಡಿ ಮೊಟ್ಟೆ ಇಡುತ್ವೆ. ಮಾರ್ಚ್‌ ತಿಂಗಳವರೆಗೂ ಒಡಿಸ್ಸಾ ಕರಾವಳಿಯಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿರುತ್ತೆ. ಇದೇ ಕಾರಣಕ್ಕೆ ಪ್ರವಾಸಿಗಳಿಗೆ ನಿಷೇಧ ಹೇರಿ ರಕ್ಷಣಾ ಪಡೆಗಳನ್ನ ನಿಯೋಜನೆ ಮಾಡಲಾಗಿರುತ್ತೆ. ಅಲ್ಲದೆ ಒಡಿಸ್ಸಾ ಸರ್ಕಾರದ ಮನವಿ ಮೇರೆಗೆ ಅಳಿವಿನಂಚಿನಲ್ಲಿರೋ ಆಮೆಗಳಿಗೆ ತೊಂದರೆ ಆಗದಂತೆ ಮಾರ್ಚ್‌ವರೆಗೂ ಈ ಭಾಗದಲ್ಲಿ ಕ್ಷಿಪಣಿ ಪರೀಕ್ಷೆ ಮಾಡಲ್ಲ ಅಂತ DRDO ಹೇಳಿದೆ.

-masthmagaa.com

Contact Us for Advertisement

Leave a Reply