ಜಮ್ಮು & ಕಾಶ್ಮೀರ: ಉಗ್ರರ ದಾಳಿಗೆ ನಿವೃತ್ತ ಪೊಲೀಸ್‌ ಅಧಿಕಾರಿ ಸಾವು!

masthmagaa.com:

ಪೂಂಚ್‌ ದಾಳಿಯ ಕಾವು ಹಾರುವ ಮುನ್ನವೇ ಜಮ್ಮು & ಕಾಶ್ಮೀರದ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಶಫಿ ಮಿರ್‌ ಇದೀಗ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆ ಅಲ್ಲಿನ ಬಾರಾಮೂಲ ಜಿಲ್ಲೆಯಲ್ಲಿ ಡಿಸೆಂಬರ್‌ 24 ಅಂದ್ರೆ ಇವತ್ತು ನಡೆದಿದೆ. ಇವ್ರು ಅಲ್ಲಿನ ಮಸೀದಿಯೊಂದ್ರಲ್ಲಿ ಪ್ರಾರ್ಥನೆ ಸಲ್ಲಿಸ್ತಿರೋ ವೇಳೆ ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ. ಸದ್ಯ ಘಟನೆ ನಡೆದಿರೋ ಏರಿಯಾದಲ್ಲಿ ಪೊಲೀಸ್‌ ಕಾವಲಿದ್ದು, ತನಿಖೆ ಸ್ಟಾರ್ಟ್‌ ಮಾಡಲಾಗಿದೆ. ಹೀಗಂತ ಜಮ್ಮು ಕಾಶ್ಮೀರ ಪೊಲೀಸ್‌ `X’ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಪೊಲೀಸ್‌ ಅಧಿಕಾರಿಗಳ ಮೇಲೆನ ದಾಳಿಗಳು ಕಾಮನ್‌ ಆಗಿವೆ. ಕಳೆದ ತಿಂಗಳಷ್ಟೇ, ಅಲ್ಲಿನ ಶ್ರೀನಗರದಲ್ಲಿರೋ ಈದ್ಗಾ ಮಸೀದಿಯೊಂದ್ರ ಬಳಿ ಪೊಲೀಸ್‌ ಇನ್ಸ್ಪೆಕ್ಟರ್‌ ಮಸ್ರೂರ್‌ ಅಹ್ಮದ್‌ ವಾನಿ ಅವ್ರ ಮೇಲೆ ಉಗ್ರರು ದಾಳಿ ನಡೆಸಿದ್ರು. ಪರಿಣಾಮ ಮಸ್ರೂರ್‌ ಅಹ್ಮದ್‌ ಅವ್ರಿಗೆ ಬಹಳ ಸೀರಿಯಸ್‌ ಗಾಯಗಳಾಗಿದ್ವು. ಇದೀಗ ನಿವೃತ್ತ ಅಧಿಕಾರಿಯೇ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply