ವಿವಾಹಿತ ಮಹಿಳೆಯ ಹನಿಟ್ರ್ಯಾಪ್‌ ಬಲೆಗೆ ಬಿದ್ದ ನಿವೃತ್ತ ಯೋಧ ನಾಪತ್ತೆ!

masthmagaa.com:

ಇತ್ತೀಚೆಗೆ ದೇಶದಲ್ಲಿ ಹನಿಟ್ರ್ಯಾಪ್‌ ಕೇಸ್‌ಗಳು ಹೆಚ್ಚಾಗ್ತಿವೆ. ಇದೀಗ ಮಹಿಳೆಯೊಬ್ಬಳಿಂದ ಹನಿಟ್ರ್ಯಾಪ್‍ಗೊಳಗಾಗಿ ನಿವೃತ್ತ ಯೋಧನೊಬ್ಬ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಾಪತ್ತೆಯಾದ ನಿವೃತ್ತ ಯೋಧನನ್ನು 40 ವರ್ಷದ ಸಂದೇಶ್ ಅಂತ ಗುರುತಿಸಲಾಗಿದೆ. ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳ ಜೊತೆ ಸ್ನೇಹ ಬೆಳಿಸಿದ್ದ ಸಂದೇಶ್‌, ಆಕೆಯಿಂದಲೇ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಸಂದೇಶ್‌, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಪತ್ರ ಬರೆದಿಟ್ಟು ತೆರಳಿದ್ದಾರೆ. ಈ ಕುರಿತು ಕೇಸ್‌ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply