ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ ತೆಲಂಗಾಣ ಸಿಎಂ!

masthmagaa.com:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರ ಫೇಕ್‌ ವಿಡಿಯೋ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು ಇದನ್ನ ಹಂಚಿಕೊಂಡ್ರು ಅಂತೇಳಿ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವ್ರಿಗೆ ಸಮನ್ಸ್‌ ನೀಡಲಾಗಿತ್ತು. ಈಗ ಈ ಬಗ್ಗೆ ರಿಯಾಕ್ಟ್‌ ಮಾಡಿರೋ ರೇವಂತ್‌ ರೆಡ್ಡಿ ʻಗುಜರಾತ್‌ನಿಂದ ತೆಲಂಗಾಣಕ್ಕೆ ಬಂದು…. ನಮ್ಮನ್ನ ಹೆದರಿಸ್ಬೋದು, ಬೆದರಿಸ್ಬೋದು ಅಂತ ನೀವು ಅನ್ಕೊಳ್ಬೋದು. ಆದ್ರೆ ಇದು ನನ್ನ ಜಾಗ… ನನ್ನ ರಾಜ್ಯ. ಇಲ್ಲಿ ಬಂದು ಬೆದರಿಕೆ ಹಾಕೋಕೆ ಧೈರ್ಯ ಮಾಡ್ಬೇಡಿ ಅಂತ ಸಿನಿಮೀಯ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ʻಅದೆಷ್ಟು ಕಾಲ ಅಂತ ಈ ರೀತಿ ಹೆದರಿಸಿ ಬೆದರಿಸಿ ಅಧಿಕಾರ ಚಲಾಯಿಸ್ತೀರಾ? ಜನರಿಗೆ ಹೆದರಿಸಿ… ಅಕ್ರಮ ಮಾಡೋಕಾಗುತ್ತೆ ಅಂತ ನೀವ್‌ ಅನ್ಕೊಂಡ್ರೆ, ಒಮ್ಮೆ ಹೋಗಿ ನಿಜಾಮ್‌ಗಳಿಗೆ ಮತ್ತು ನವಾಬ್‌ಗಳಿಗೆ ಏನಾಗಿದೆ ಅಂತ ನೋಡಿʼ ಅಂತ ಮೋದಿ ವಿರುದ್ಧ ಗುಡುಗಿದ್ದಾರೆ. ಇನ್ನು ಈ ಫೇಕ್‌ ವಿಡಿಯೋ ಸಂಬಂಧ ತೆಲಂಗಾಣ ಕಾಂಗ್ರೆಸ್‌ನ ಐಟಿ ಸೆಲ್‌ನ ಮೂವರನ್ನ ಬಂಧಿಸಲಾಗಿದೆ. ಇನ್ನೊಂದ್ಕಡೆ ಅಮಿತ್‌ ಶಾ ಅವ್ರ ಫೇಕ್‌ ವಿಡಿಯೋವನ್ನ ಪೋಸ್ಟ್‌ ಮಾಡಿದ ಜಾರ್ಖಂಡ್‌ ಕಾಂಗ್ರೆಸ್‌ನ ಅಧಿಕೃತ `X’ ಖಾತೆಯನ್ನ ಇದೀಗ ತಡೆಹಿಡಿಯಲಾಗಿದೆ. ಅಂದ್ಹಾಗೆ ಅಮಿತ್‌ ಶಾ ಅವ್ರು ʻSC, ST ಮತ್ತು OBC ಮೀಸಲಾತಿ ರದ್ದು ಮಾಡ್ತೀನಿʼ ಅಂತ ಹೇಳಿರೋ ತರ ಎಡಿಟ್‌ ಮಾಡಲಾಗಿರೋ ವಿಡಿಯೋ ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.

-masthmagaa.com

Contact Us for Advertisement

Leave a Reply