ತೈಲದ ಡಿಮ್ಯಾಂಡ್‌ ಉಳಿಸಿಕೊಳ್ಳೋಕೆ ಸೌದಿ ಪ್ಲಾನ್‌? ರಹಸ್ಯ ತನಿಖೆ!

masthmagaa.com:

ತೈಲ ರಾಷ್ಟ್ರಗಳ ಲೀಡರ್‌ ಸೌದಿ ಅರೇಬಿಯಾ ತೈಲದ ಮೇಲಿನ ಡಿಮ್ಯಾಂಡನ್ನ ಹಾಗೇ ಉಳಿಸಿಕೊಳ್ಳೋಕೆ ಮೇಜರ್ ಪ್ಲಾನ್‌‌ ಒಂದನ್ನ ಹಾಕಿದೆ ಅನ್ನೋ ವಿಚಾರ ಬಯಲಾಗಿದೆ. ಮೇಲ್ನೋಟಕ್ಕೆ ಪ್ಯಾರಿಸ್‌ ಅಗ್ರೀಮೆಂಟನ್ನ ಒಪ್ಕೊಂಡು, ಜಾಗತೀಕ ತಾಪಮಾನ ಕಂಟ್ರೋಲ್‌ ಮಾಡೋಕೆ ಕೈ ಜೋಡಿಸ್ತೀವಿ. ತೈಲ ಸಂಪನ್ಮೂಲದ ಮೇಲೆ ಡಿಪೆಂಡ್‌ ಆಗದೆ ನಮ್ಮ ಎಕನಮಿಯನ್ನ ಡೈವರ್ಸಿಫೈ ಮಾಡ್ತೀವಿ ಅನ್ನೊ ಸೌದಿ, oil demand sustainability programme (ODSP) ಹಾಕೊಂಡಿದೆ ಅಂತ ಗೊತ್ತಾಗಿದೆ. Centre for Climate Reporting ಹಾಗೂ ಚಾನೆಲ್‌ 4ಗಳು ಮಾಡಿದ ರಹಸ್ಯ ತನಿಖೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಆಫ್ರಿಕದ ಬಡ ದೇಶಗಳು ಹಾಗೂ ಇತರ ದೇಶಗಳಲ್ಲಿ ಕಟ್ಟಿಗೆ ಬದಲು ಅಡುಗೆ ಅನಿಲ ಪೂರೈಕೆ ಮಾಡ್ತೀವಿ ಅಂತ ಸೌದಿ ಬಿಂಬಿಸಿದೆ. ಆದ್ರೆ ODSP ಪ್ಲಾನ್‌ನಲ್ಲಿ ʻಅರಾಮ್ಕೊʼ ಸೇರಿದಂತೆ ತನ್ನ ಪೆಟ್ರೋಲಿಯಂ ಕಂಪನಿಗಳ ಜೊತೆ ಸೇರಿ ಪೆಟ್ರೋಲಿಯಂ ಚಾಲಿತ ಕಾರುಗಳು, ಬಸ್‌, ಸೂಪರ್‌ಸಾನಿಕ್‌ ವಿಮಾನಗಳು (ಮೂರು ಪಟ್ಟು ಅಧಿಕ ಇಂಧನ ಬಳಸುತ್ತವೆ), ಹಡಗುಗಳ ಅಭಿವೃದ್ಧಿಯನ್ನ ಬೂಸ್ಟ್‌ ಮಾಡೋಕೆ ಸೌದಿ ಬಂಡವಾಳ ಹಾಕಿದೆ ಅನ್ನೋದು ಗೊತ್ತಾಗಿದೆ. ಅಭಿವೃದ್ದಿ ಆಗಿರೋ, ಆಗ್ತಿರೋ ದೇಶಗಳು ಕ್ಲೀನ್‌ ಎನರ್ಜಿ ಅಂದ್ರೆ ಎಲೆಕ್ಟ್ರಿಕ್‌ ವಾಹನಗಳ ಕಡೆಗೆ ಮುಖ ಮಾಡಿರೋದ್ರಿಂದ, ಸೌದಿ ಬಡ ರಾಷ್ಟ್ರಗಳಲ್ಲಿ, ಅದ್ರಲ್ಲೂ ಆಫ್ರಿಕನ್‌ ದೇಶಗಳಲ್ಲಿ ತನ್ನ ಪ್ಲಾನ್‌ ಇಂಪ್ಲಿಮೆಂಟ್‌ ಮಾಡೋಕೆ ಕೈ ಹಾಕಿದೆ ಎನ್ನಲಾಗ್ತಿದೆ. ಸ್ವತಃ ಸೌದಿ ಪ್ರಿನ್ಸ್‌ ಮೊಹಮದ್‌ ಬಿನ್‌ ಸಲ್ಮಾನ್‌ ಈ ಯೋಜನೆಯ ಮೇಲ್ವಿಚಾರಣೆ ಮಾಡ್ತಿದ್ದಾರೆ ಅಂತ ತಿಳಿದು ಬಂದಿದೆ. ʻಪವರ್‌ ಶಿಫ್ಟ್‌ ಆಫ್ರಿಕʼ ಅನ್ನೊ ಥಿಂಕ್‌ಟ್ಯಾಂಕ್‌ ಒಂದರ ನಿರ್ದೇಶಕ ಮೊಹಮದ್‌ ಅದೋವ್‌ ಅನ್ನೋರು ಈ ಬಗ್ಗೆ ಮಾತನಾಡಿ, “ಸೌದಿ ಸರ್ಕಾರ ಆಫ್ರಿಕವನ್ನ ತನ್ನ ಹಾನಿಕಾರಕ ಪ್ರಾಡಕ್ಟ್‌ಗಳಿಗೆ ತಗಲಾಕೋ ಡ್ರಗ್‌ ಡೀಲರ್‌ ತರ ಕೆಲಸ ಮಾಡ್ತಿದೆ” ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply