ರಿಷಬ್‌ ಶೆಟ್ಟಿಗೆ ಒಲಿದು ಬಂದ ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ!

masthmagaa.com:

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವ್ರಿಗೆ ಕಾಂತಾರ ಸಿನಿಮಾದಿಂದ ವಿಶ್ವ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ಇದೀಗ ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ʻಅತ್ಯಂತ ಭರವಸೆಯ ನಟʼ ಪ್ರಶಸ್ತಿಗೆ ರಿಷಬ್‌ ಭಾಜನರಾಗಿದ್ದಾರೆ. ಅಂದ್ಹಾಗೆ ಇದು ಭಾರತ ಸರ್ಕಾರ ನೀಡುವ ದಾದಾ ಸಹೇಬ್‌ ಪಾಲ್ಕೆ ಪ್ರಶಸ್ತಿ ಅಲ್ಲ, ಖಾಸಗಿ ಸಂಸ್ಥೆಯೊಂದು ನೀಡುವ ಪ್ರಶಸ್ತಿಯಾಗಿದೆ. ಫೆಬ್ರವರಿ 20ರಂದು ಮುಂಬೈನ ತಾಜ್‌ ಲ್ಯಾಂಡ್ಸ್‌ ಎಂಡ್‌ ಹೊಟೇಲ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ.

-masthmagaa.com

Contact Us for Advertisement

Leave a Reply