ಬ್ರಿಟನ್‌ನಲ್ಲಿ ಕಾರ್ಮಿಕರ ಮುಷ್ಕರ, ಸೇನೆ ಬಳಸಲು ಮುಂದಾದ ರಿಷಿ ಸುನಾಕ್‌!

masthmagaa.com:

ಬ್ರಿಟನ್‌ನಲ್ಲಿ ನಡೆಯಲಿರೋ ಮುಷ್ಕರಗಳನ್ನ ಕಂಟ್ರೋಲ್‌ ಮಾಡೋಕೆ ಆರ್ಮಿ ಬೇಕಾದ್ರು ಬಳಸ್ತೀನಿ ಅಂತ ಅಲ್ಲಿನ ಪ್ರಧಾನಿ ರಿಷಿ ಸುನಾಕ್‌ ಹೇಳಿದ್ದಾರೆ. ರೈಲ್ವೆ, ಹೆಲ್ತ್‌ಕೇರ್‌ ಮತ್ತು ಬಾರ್ಡರ್‌ ಸೆಕ್ಯುರಿಟಿ ಸಿಬ್ಬಂದಿ ಸೇರಿದಂತೆ ಹಲವು ಉದ್ಯೋಗಿಗಳು ವೇತನ ಮತ್ತು ಉತ್ತಮ ಕೆಲಸದ ವಾತಾವರಣ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಮುಂದಿನ ಕೆಲವು ವಾರಗಳ ಕಾಲ ಸ್ಟ್ರೈಕ್‌ ಮಾಡೋಕೆ ಪ್ಲಾನ್‌ ಮಾಡಿದ್ದಾರೆ ಅಂತ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಟ್ರೈಕ್‌ ವೇಳೆ ಯಾವುದೇ ಸೇವೆಗಳಿಗೆ ತೊಂದ್ರೆ ಆಗ್ಬಾರ್ದು ಅಂತ ಸುಮಾರು 1,200 ಮಿಲಿಟರಿ ಟ್ರೂಪ್‌ಗಳನ್ನ ಈ ಕೆಲಸಗಳಿಗೆ ನಿಯೋಜಿಸಲಾಗುತ್ತೆ ಅಂತ ಸುನಾಕ್‌ ಹೇಳಿದ್ದಾರೆ. ಹಾಗೂ ಕಾರ್ಮಿಕ ಸಂಘಗಳ ಬೇಡಿಕೆಯನ್ನ ಈಡೇರಿಸೋಕೆ ವೇತನವನ್ನ ಜಾಸ್ತಿ ಮಾಡಿದ್ರೆ ದೇಶ ಹಣದುಬ್ಬರದ ಸುಳಿಯಲ್ಲಿ ಸಿಕ್ಕಿಕೊಳ್ಬೇಕಾಗುತ್ತೆ, ಇದ್ರಿಂದ ಬಡವರಿಗೆ ತೊಂದ್ರೆಯಾಗುತ್ತೆ ಅಂತ ಸರ್ಕಾರ ಎಚ್ಚರಿಸಿದೆ. ಇನ್ನೊಂದ್‌ ಕಡೆ ಆರ್ಮಿಗೆ ಈಗಾಗಲೇ ಸಾಕಷ್ಟು ಕೆಲಸ ಇರೋ ವೇಳೆ ಅವ್ರನ್ನ ಈ ತರದ ಪರಿಸ್ಥಿತಿಗಳಲ್ಲಿ ಬಳಸೋದು ಸರಿಯಲ್ಲ ಅಂತ ಸುನಾಕ್‌ರ ನಿರ್ಧಾರವನ್ನ ಕಾರ್ಮಿಕರ ಸಂಘಟನೆ ಮುಖ್ಯಸ್ಥ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply