ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ಗೆ ಮತ್ತೊಂದು ಸಂಕಷ್ಟ! ಏನದು?

masthmagaa.com:

ಈಗಾಗಲೇ ತಮ್ಮ ಪಕ್ಷದ ಸದಸ್ಯರ ವಿರೋಧವನ್ನ ಎದುರಿಸ್ತಿರೋ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ಗೆ ಮತ್ತೊಂದು ಸಂಕಷ್ಟ ಎದುರಾಗೋ ಲಕ್ಷಣ ಕಾಣ್ತಿದೆ. ಇಂಟರ್‌ನೆಟ್‌ ಬಳಸೋ ಮಕ್ಕಳು ಕೆಲವು ಅಶ್ಲೀಲ ವೆಬ್‌ಸೈಟ್‌ಗಳನ್ನ ನೋಡೋದನ್ನ ತಪ್ಪಿಸೋಕೆ ಕಾನೂನು ತರೋಕೆ ಕನ್ಸರ್ವೇಟಿವ್‌ ಪಕ್ಷ ಒತ್ತಾಯಿಸುತ್ತಿದೆ. ಈ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನನ್ನ ತರಬೇಕು ಅಂತ ಪಕ್ಷದ ಶಾಸಕರು ಸುನಾಕ್‌ ಅವ್ರಿಗೆ ಫೋರ್ಸ್‌ ಮಾಡ್ತಿದ್ದಾರೆ ಎನ್ನಲಾಗಿದೆ. ಇದೀಗ ಆನ್‌ಲೈನ್‌ ಸೇಫ್ಟಿ ಮಸೂದೆ ತಿದ್ದುಪಡಿ ಮಾಡಲಾಗಿದ್ದು, ಅದ್ರ ಮೇಲೆ ಅಲ್ಲಿನ ಸಂಸತ್ತಿನಲ್ಲಿ ಚರ್ಚೆ ನಡೆಸಲಾಗ್ತಿದೆ. ಈ ಮಸೂದೆ ಜಾರಿಯಾಗಿ 6 ತಿಂಗಳೊಳಗೆ ಪಾರ್ನ್ ವೆಬ್‌ಸೈಟ್‌ಗಳು ಏಜ್‌ ವೆರಿಫಿಕೇಷನ್‌ ಸಿಸ್ಟಮ್‌ ಅನ್ನ ಅಳವಡಿಸಿಕೊಳ್ಬೇಕು ಅಂತ ಪ್ರಸ್ತಾಪಿಸಿದೆ. ಈ ಮಸೂದೆ ಮಕ್ಕಳನ್ನ ಅಶ್ಲೀಲ ವೆಬ್‌ಸೈಟ್‌ಗಳಿಂದ ಪ್ರೊಟೆಕ್ಟ್‌ ಮಾಡೋಕೆ ಡಿಸೈನ್‌ ಮಾಡಲಾಗಿದ್ದು ಸೋಮವಾರ ಅಲ್ಲಿನ ಮೇಲ್ಮನೆಯಲ್ಲಿ ಪಾಸ್‌ ಮಾಡೋ ಪ್ರಕ್ರಿಯೆ ಪ್ರಾರಂಭವಾಗುತ್ತೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಈ ಹಿಂದೆ 2017ರಲ್ಲೂ ಈ ರೀತಿಯ ಏಜ್‌ ವೆರಿಫಿಕೇಷನ್‌ ಮಸೂದೆಯನ್ನ ಪ್ರಸ್ತಾಪಿಸಲಾಗಿತ್ತು. ಆದ್ರೆ ಸರ್ಕಾರ ಅವುಗಳನ್ನ ಇಂಪ್ಲಿಮೆಂಟ್‌ ಮಾಡದೆ ಕೈಬಿಟ್ಟಿತ್ತು. ಇದೀಗ ಮತ್ತೆ ಸರ್ಕಾರದ ಮುಂದೆ ಈ ಮಸೂದೆಯನ್ನ ಮಂಡಿಸಲಾಗಿದೆ.

-masthmagaa.com

Contact Us for Advertisement

Leave a Reply