ಬ್ರಿಟನ್‌ನಲ್ಲಿ ಸಿಗರೇಟ್‌ ಬ್ಯಾನ್‌ ಮಾಡ್ತಾರಾ ರಿಷಿ ಸುನಾಕ್‌?

masthmagaa.com:

ಬ್ರಿಟನ್‌ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗರೇಟ್‌ ಸೇದೋದು ನೀರು ಕುಡಿದಷ್ಟೇ ಸರ್ವೇ ಸಾಮಾನ್ಯ ಜೊತೆಗೆ ಒಂದು ಮಟ್ಟಿಗೆ ಅವ್ರಿಗೆ ಅನಿವಾರ್ಯವಾಗಿರೋ ಅಗತ್ಯತೆ. ಆದ್ರೀಗ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್ ಬ್ರಿಟನ್‌ನಲ್ಲಿ ಸಿಗರೇಟ್ ಬಳಕೆ ನಿಷೇಧಿಸಲು ಮುಂದಾಗಿದ್ದಾರೆ ಅಂತ ತಿಳಿದು ಬಂದಿದೆ. 2009ರ ಜನವರಿ 1ರಂದು ಅಥವಾ ನಂತರ ಜನಿಸಿರುವವರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಧೂಮಪಾನ ವಿರೋಧಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಈ ಮೂಲಕ 2030ರ ವೇಳೆಗೆ ಯುವಕರನ್ನು ಧೂಮಪಾನ ಮುಕ್ತರನ್ನಾಗಿ ಮಾಡಲು ಬಯಸುತ್ತೇನೆ, ಅದಕ್ಕಾಗಿ ನಾವು ಈಗಾಗಲೇ ಸಿಗರೇಟ್ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ. ಗರ್ಭಿಣಿಯರು ಸಿಗರೇಟ್ ತ್ಯಜಿಸಲು ಪ್ರೋತ್ಸಾಹಿಸುವ ವೋಚರ್ ಯೋಜನೆಯಂತಹ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಅಂತ ಬ್ರಿಟನ್‌ ಸರ್ಕಾರದ ವಕ್ತಾರೊಬ್ಬರು ಹೇಳಿರೋದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply