ಅಮೆರಿಕನ್‌ ತಳಿಯ ನಾಯಿಯನ್ನ ಬ್ಯಾನ್‌ ಮಾಡಿದ ಬ್ರಿಟನ್‌!

masthmagaa.com:

ಬ್ರಿಟನ್‌ನಲ್ಲಿ ಅಮೆರಿಕನ್‌ ಬುಲ್ಲಿ XL ನಾಯಿಗಳ ದಾಳಿ ಜಾಸ್ತಿಯಾಗ್ತಿದೆ. ಇತ್ತೀಚೆಗೆ ಈ ತಳಿಯ ಎರಡು ಶ್ವಾನಗಳ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಅಮೆರಿಕನ್‌ ಬುಲ್ಲಿ XL ನಾಯಿಗಳನ್ನ ಬ್ರಿಟನ್‌ನಲ್ಲಿ ನಿಷೇಧಿಸಲಾಗುತ್ತೆ ಅಂತ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅನೌನ್ಸ್‌ ಮಾಡಿದ್ದಾರೆ. ಅಪಾಯಕಾರಿ ನಾಯಿಗಳ ಕಾಯಿದೆಯಡಿಯಲ್ಲಿ ಈ ತಳಿಯನ್ನು ನಿಷೇಧಿಸುತ್ತೇವೆ. ಜೊತೆಗೆ ಬ್ರಿಟನ್‌ನಲ್ಲಿ ಈ ತಳಿ ಸಂಪೂರ್ಣವಾಗಿ ಕೊನೆಯಾಗೋವರೆಗೂ ಕಾನೂನು ಜಾರಿಯಲ್ಲಿರಲಿದೆ ಅಂತ ಸುನಾಕ್‌ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply