ಬ್ರಿಟನ್‌ ಪ್ರಧಾನಿಯಾಗೋಕೆ ರಿಷಿ ಸುನಾಕ್‌ ಮಹತ್ವದ ಪ್ರತಿಜ್ಞೆ! ಏನದು?

masthmagaa.com:

ಬ್ರಿಟನ್‌ನ ಪಿಎಂ ರೇಸ್‌ನಲ್ಲಿರೊ ಕರ್ನಾಟಕದ ಅಳಿಯ ರಿಷಿ ಸುನಾಕ್‌ ಇದೀಗ ಮಹತ್ವದ ಪ್ರತಿಜ್ಞೆ ಒಂದನ್ನ ಮಾಡಿದ್ದಾರೆ. ತಾವು ಪ್ರಧಾನಿಯಾಗಿ ಆಯ್ಕೆ ಆದ್ರೆ ಯುಕೆಯನ್ನ ಬಿಕ್ಕಟ್ಟಿನ ತೀರ ಕೆಳಹಂತದಲ್ಲಿ ಇಡ್ತೀನಿ ಅಂತ ಮಾತುಕೊಟ್ಟಿದ್ದಾರೆ. ರೇಸ್‌ನ ಕೊನೆಯ ಭಾಗವಾಗಿ ತಮ್ಮ ಚುನಾವಣಾ ಅಭಿಯಾನವನ್ನ ತೀವ್ರಗೊಳಿಸಿದ ರಿಷಿ, ಕನ್ಸರ್ವೇಟಿವ್‌ ಪಕ್ಷದ ಮತಗಳನ್ನ ಪಡೆಯೋಕೆ ಈ ರೀತಿ ಪ್ರತಿಜ್ಞೆ ಮಾಡಿದ್ದಾರೆ. ಅಂದ್ಹಾಗೆ ಈಗ ಬ್ರಿಟನ್‌ ಪ್ರಧಾನಿ ಯಾರಾಗ್ತಾರೆ ಅಂತ ಕನ್ಸರ್ವೇಟಿವ್‌ ಪಕ್ಷದ ಸುಮಾರು 2 ಲಕ್ಷ ಕಾರ್ಯಕರ್ತರು ಡಿಸೈಡ್‌ ಮಾಡ್ತಾರೆ. ಮೂಲಗಳ ಪ್ರಕಾರ ಈ ಕಾರ್ಯಕರ್ತರ ಒಲವು ಲಿಜ್‌ ಟ್ರುಸ್‌ ಪರ ಇದೆ. ಸುಮಾರು 62% ಜನ ಲಿಜ್‌ ಟ್ರುಸ್‌ ಸಪೋರ್ಟ್‌ ಮಾಡ್ತಾರೆ ಎನ್ನಲಾಗಿದೆ. ಆದ್ದರಿಂದ ರಿಷಿ ಈ ರೀತಿ ಹೇಳಿಕೆಗಳನ್ನ ನೀಡಿ ಪಕ್ಷದವ್ರನ್ನ ತಮ್ಮತ್ತ ಸೆಳೆಯೋ ಪ್ರಯತ್ನ ಮಾಡ್ತಿದಾರೆ.

-masthmagaa.com

Contact Us for Advertisement

Leave a Reply