ಕೊರೊನಾ ತನಿಖೆಗೆ ಸ್ಪಂದಿಸದ ರಿಷಿ ಸುನಾಕ್‌ ಆಡಳಿತ! ಕಾರಣವೇನು?

masthmagaa.com:

ಕೊರೊನಾ ಪ್ಯಾಂಡ‌ಮಿಕ್‌ನ ನಿರ್ವಹಣೆ ಕುರಿತ ತನಿಖೆಯ ಭಾಗವಾಗಿ ವಾಟ್ಸಾಪ್‌ ಮೆಸೇಜ್‌ನ್ನ ತನಿಖಾ ಸಮಿತಿಗೆ ನೀಡಲು ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ನಿರಾಕರಿಸಿದ್ದಾರೆ ಅಂತ ತಿಳಿದು ಬಂದಿದೆ. ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ರ ವಾಟ್ಸಾಪ್‌ ಮೆಸೇಜ್‌ಗಳು ಹಾಗೂ ಕೊರೊನಾ ಟೈಮ್‌ನ ಡೈರಿಗಳನ್ನ ತನಿಖಾ ಸಮಿತಿಗೆ ನೀಡಲು ಸುನಾಕ್‌ ಆಡಳಿತದ ಸರ್ಕಾರ ಹಿಂದೇಟು ಹಾಕಿದೆ. ಕೊರೊನಾ ಪ್ಯಾಂಡಮಿಕ್‌ನ್ನ ಸಚಿವರು ಹಾಗೂ ಅಧಿಕಾರಿಗಳು ಹೇಗೆ ಹ್ಯಾಂಡಲ್‌ ಮಾಡಿದ್ರು ಅಂತ ತಿಳಿಯೋಕೆ ಈ ದಾಖಲೆಗಳು ಅಗತ್ಯವಾಗಿಲ್ಲ ಅಂತ ಸರ್ಕಾರ ಪ್ರತಿಕ್ರಿಯಿಸಿದೆ. ಈ ಮೂಲಕ ಸುನಾಕ್‌ ಸೂಕ್ಷ್ಮ ಮಾಹಿತಿಗಳನ್ನ ಕವರ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ ಅನ್ನೊ ಆರೋಪಗಳು ಕೇಳಿಬರ್ತಿವೆ. ಅಲ್ದೇ ವಿರೋಧ ಪಕ್ಷ, ಕೋವಿಡ್‌ನಿಂದ ತೊಂದರೆಗೊಳಗಾದ ಕುಟುಂಬಗಳು, ಡಾಕ್ಟರ್‌ಗಳ ಜೊತೆ ಕನ್ಸರ್ವೇಟಿವ್‌ ಪಕ್ಷದ ಕೆಲ ಸದಸ್ಯರು ತನಿಖೆಗೆ ಸಹಕರಿಸುವಂತೆ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply