ವಿಲಿಯಮ್ಸನ್‌ರನ್ನ ನೇಮಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ರಿಷಿ ಸುನಾಕ್!

masthmagaa.com:

ಇತ್ತೀಚೆಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ರ ಕ್ಯಾಬಿನೆಟ್‌ನಿಂದ ಸಚಿವ ಗೇವಿನ್‌ ವಿಲಿಯಮ್ಸನ್‌ ರಾಜೀನಾಮೆ ನೀಡಿದ್ರು. ಇವರನ್ನ ನೇಮಕ ಮಾಡಿದ್ದ ಸುನಾಕ್‌ ವಿರುದ್ದ ಅನೇಕ ಟೀಕೆಗಳು ಕೇಳಿಬಂದಿದ್ವು. ಇದೀಗ ಸುನಾಕ್‌, ಆ ಗೇವಿನ್ ಅವ್ರನ್ನ ನೇಮಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗೂ ಅವರ ಹಿಂದಿನ ಸರ್ಕಾರದ ವಿಷಯಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ ಅಂತ ಸುನಾಕ್‌ ಸಮರ್ಥಿಸಿಕೊಂಡಿದ್ದಾರೆ. ಅಂದ್ಹಾಗೆ ವಿಲಿಯಮ್ಸನ್‌ ಹೊಸ ಸರ್ಕಾರ ರಚನೆಯಾದ ಮೇಲೆ ಶಾಸಕರಿಗೆ ಹಾಗೂ ಅವರ ಮಾಜಿ ಸಿಬ್ಬಂದಿಗೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಿದ್ದಾರೆ ಅಂತ ಆರೋಪಿಸಲಾಗಿತ್ತು. ಈ ಕಾರಣಕ್ಕೆ ಅವರ ವಿರುದ್ದ ಅನೇಕ ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ರು.

-masthmagaa.com

Contact Us for Advertisement

Leave a Reply