ತಂದೆ ತಾಯಿಯ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ರಿಷಿ ಸುನಾಕ್‌! ಏನಂದ್ರು ಗೊತ್ತಾ?

masthmagaa.com:

ಯುಕೆ ಪ್ರಧಾನಿ ರೇಸ್‌ನ ಫೈನಲ್‌ ಸೆಣೆಸಾಟದಲ್ಲಿರುವ ಭಾರತ ಮೂಲದ ರಿಷಿ ಸುನಾಕ್‌ ತಮ್ಮ ತಂದೆ ತಾಯಿಯ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ಲಿಜ್ ಟ್ರಸ್‌ ಅಂದ್ರೆ ರಿಷಿಯವರ ಎದುರಾಳಿಯ ಜೊತೆಗಿನ ಡಿಬೇಟ್‌ ವೇಳೆ ಮಾತನಾಡಿದ ಅವ್ರು ನಮ್ಮ ಕುಟುಂಬ 60 ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂತು. ನನ್ನ ತಾಯಿ ಸೌತಾಂಪ್ಟನ್‌ನಲ್ಲಿ ಒಂದು ಸ್ಥಳೀಯ ಮೆಡಿಕಲ್‌ ಶಾಪ್ ನಡೆಸುತ್ತಿದ್ದರು. ಅಲ್ಲಿಯೇ ನಾನು ಔಷಧಗಳನ್ನು ವಿತರಿಸುತ್ತಾ ಬೆಳೆದೆ.. ನಾನು ಇಂಡಿಯನ್‌ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೂಡ ಕೆಲಸ ಮಾಡಿದ್ದೀನಿ. ನನ್ನ ತಂದೆ ತಾಯಿಯರ ಶ್ರಮ, ತ್ಯಾಗ,ನನಗೆ ಅವರು ನೀಡಿದ ಅವಕಾಶಗಳಿಂದ ನಾನು ಇಲ್ಲಿ ನಿಂತಿದ್ದೇನೆ. ಮುಂದೆ ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಈ ರೀತಿಯ ಅವಕಾಶವಿದೆ ಅಂತ ನಾನು ಎಲ್ಲರಿಗೂ ತೋರಿಸ್ಬೇಕು. ಹಾಗಾಗಿ ನಾನು ಪ್ರಧಾನಿಯಾಗ್ಬೇಕು ಅಂತ ಹೇಳಿದ್ದಾರೆ..

-masthmagaa.com

Contact Us for Advertisement

Leave a Reply