ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಪುನರುಚ್ಚರಿಸಿದ ರಿಷಿ ಸುನಾಕ್!

masthmagaa.com:

ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಬದ್ಧತೆ ಬಗ್ಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಪುನಃ ಉಚ್ಚರಿಸಿದ್ದಾರೆ. ಕಳೆದ ತಿಂಗಳು ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ರಿಷಿ, ವಿದೇಶಾಂಗ ನೀತಿ ಕುರಿತು ತಮ್ಮ ಮೊದಲ ಭಾಷಣದಲ್ಲಿ ಈ ಬಗ್ಗೆ ಮಾತಾಡಿದ್ದಾರೆ. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿನ ಸಂಬಂಧಗಳನ್ನ ಮತ್ತಷ್ಟು ಗಟ್ಟಿಗೊಳಿಸೊ ನಿಟ್ಟಿನಲ್ಲಿ ಭಾರತದ ಜೊತೆಗಿನ ಮುಕ್ತ ವ್ಯಾಪಾರದ ಮಹತ್ವದ ಬಗ್ಗೆ ಹೇಳಿದ್ದಾರೆ. ಹಾಗೂ ನಾನು ರಾಜಕೀಯಕ್ಕೂ ಬರೊ ಮೊದಲು, ಪ್ರಪಂಚದಾದ್ಯಂತ ಬ್ಯುಸಿನೆಸ್‌ಗಳಲ್ಲಿ ಹೂಡಿಕೆ ಮಾಡಿದ್ದೇನೆ. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಅವಕಾಶಗಳು ಜಾಸ್ತಿಯಿವೆ ಅಂತ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply